Mysore
21
overcast clouds

Social Media

ಭಾನುವಾರ, 14 ಜೂನ್ 2026
Light
Dark

ಓದುಗರ ಪತ್ರ: ಶಾಲಾ ಶಿಕ್ಷಣದಲ್ಲಿ ಕೃಷಿ ಬಗ್ಗೆ ಪಠ್ಯ ಅಳವಡಿಸಿ

ಓದುಗರ ಪತ್ರ

ಮನುಷ್ಯನಿಗೆ ಅತ್ಯಗತ್ಯವಾಗಿರುವುದು ಆಹಾರ. ಇದಕ್ಕೆ ಕೃಷಿಯೇ ಮೂಲ. ರೈತನ ಪರಿಶ್ರಮದಿಂದ ಜನರು ನೆಮ್ಮದಿಯಿಂದ ಊಟ ಮಾಡಲು ಸಾಧ್ಯವಾಗಿದೆ.

ಆಧುನಿಕ ಆವಿಷ್ಕಾರಗಳಿಂದ ಬೆಳೆ ಬೆಳೆಯಲು ಸಾಧ್ಯವೇಇಲ್ಲ.ಇದು ಎಲ್ಲರಿಗೂ ತಿಳಿದಿರುವ ವಿಚಾರ ಕೂಡ . ರೈತನನ್ನು ವೇದಿಕೆ ಮೇಲೆ ಹೊಗಳುವುದನ್ನು ಬಿಟ್ಟರೆ. ವಾಸ್ತವದಲ್ಲಿ ರೈತನು ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಆತ ನರಳುವಾಗ ಸ್ಪಂದಿಸುವ ಮನಸ್ಸುಗಳು ತುಂಬಾ ಕಡಿಮೆ. ಇಲ್ಲಿಯ ವರೆಗೂ ಬಂದ ಸರ್ಕಾರಗಳು ರೈತರ ಪರವಾಗಿದ್ದೇವೆ ಎಂದು ಹೇಳುತ್ತಲೇ ಇದ್ದರೂ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಲೇ ಇವೆ ಹಾಗೂ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ಇಳಿಮುಖವಾಗುತ್ತಲೇ ಇಲ್ಲ.

ರೈತನಾಗಿದ್ದರೂ ತನ್ನ ಮಗಳನ್ನು ರೈತನಿಗೆ ಮದುವೆ ಮಾಡಿ ಕೊಡಲು ಹಿಂಜರಿಯುವ ವ್ಯವಸ್ಥೆಯನ್ನು ಕಾಣಬಹುದು. ಕೃಷಿ ಬಗೆಗಿನ ತಾತ್ಸಾರ ಮನೋಭಾವನೆ ಹೋಗಲಾಡಿಸಿ, ಅವರ ಬದುಕು ಬಂಗಾರದಂತೆ ಮಾಡಲು ಸರ್ಕಾರ ಇನ್ನೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ ಕೃಷಿ ಕ್ಷೇತ್ರದ ಪ್ರಗತಿಯ ಸಾಧ್ಯತೆ ಮತ್ತು ಅದು ಯಾವುದಕ್ಕೂ ಕಮ್ಮಿ ಇಲ್ಲ ಎಂಬ ಅರಿವು ಹೆಚ್ಚಾಗಬೇಕಾದರೆ ಶಾಲಾ ಶಿಕ್ಷಣದಲ್ಲಿ ಕೃಷಿಯ ಪಠ್ಯವನ್ನು ಅಳವಡಿಸಬೇಕು ಮತ್ತು ಸಣ್ಣ ವಯಸ್ಸಿನಲ್ಲೇ ಮಕ್ಕಳು ಈ ಕ್ಷೇತ್ರದ ಕನಿಷ್ಠ ಜ್ಞಾನ ತಿಳಿಯುವುದು ಅಗತ್ಯವಾಗಿದೆ.

-ಪಿ. ಸಿ. ಕಂಗಾಣಿ ಸೋಮು, ಮೈಸೂರು

Tags:
error: Content is protected !!