Mysore
24
overcast clouds

Social Media

ಬುಧವಾರ, 10 ಜೂನ್ 2026
Light
Dark

ಎಚ್.ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನಕ್ಕೆ ದಲಿತ ಸಂಘಟನೆಗಳ ಆಗ್ರಹ

ವರುಣ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡಬೇಕು ಎಂದು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಲಿತ ಸಂಘಟನೆಗಳ ನಾಯಕರು ಆಗ್ರಹಿಸಿದರು.

ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುತ್ತೂರು ಪ್ರವಾಸಿ ಮಂದಿರದ ಬಳಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು ಮಾತನಾಡಿ, ಮಹದೇವಪ್ಪನವರು ಸಿದ್ದರಾಮಯ್ಯ ಅವರು ಈ ಭಾಗದ ಹಿರಿಯ ದಲಿತ ರಾಜಕಾರಣಿಯಾಗಿದ್ದು, ಅವರ ಕಡೆಗಣನೆ ಸಲ್ಲದು ಎಂದರು.

ಮುಂದಿನ ಸಚಿವ ಸಂಪುಟದ ವಿಸ್ತರಣೆಯಲ್ಲಿ ಮಹದೇವಪ್ಪನವರಿಗೆ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ದಲಿತರ ಮತ ಬೇಕು. ಆದರೆ ಅವರುಗಳಿಗೆ ಅಧಿಕಾರ ಕೊಡುವಾಗ ಮಾತ್ರ ಕಡೆಗಣನೆ ಏಕೆ? ಎಂದ ಆಲಗೂಡು ಶಿವಕುಮಾರ, ಬನ್ನಳ್ಳಿ ಸೋಮಣ್ಣ, ಚುಂಚನಹಳ್ಳಿ ಮಲ್ಲೇಶ, ಕಾರ್ಯ ಬಸವಣ್ಣ, ನಗರ್ಲೆ ಪುಟ್ಟಸ್ವಾಮಿ, ಮಂಜು ಮತ್ತಿತರರು ಪ್ರಥಮ ಕಂತಿನಲ್ಲೇ ಮಹದೇವಪ್ಪನವರಿಗೆ ಸಚಿವ ಸ್ಥಾನದ ಗೌರವವನ್ನು ಕಾಂಗ್ರೆಸ್ ನೀಡಬೇಕಿತ್ತು ಎಂದರು.

ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ಅವರ ಗೆಲುವಿನಲ್ಲಿ ದಲಿತರ ಪಾತ್ರ ಅತ್ಯಂತ ಮಹತ್ತರವಾದದ್ದು. ಪ್ರತಿ ಚುನಾವಣೆಯಲ್ಲಿ ಶೇ.೯೦ರಷ್ಟು ದಲಿತರ ಮತ ಪಡೆಯುವ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡುವಾಗ ಮಾತ್ರ ಒಕ್ಕಲಿಗರು, ಲಿಂಗಾಯತರು ಮಾತ್ರ ನೆನಪಾಗುತ್ತಾರೆ ಎಂದು ಕಿಡಿಕಾರಿದರು.

ಈ ಭಾಗದ ಹಿರಿಯ ರಾಜಕಾರಣಿಯಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರು ನಿಧನರಾದ ಬಳಿಕ ಹಳೇ ಮೈಸೂರು ಪ್ರಾಂತ್ಯಕ್ಕೆ ಮಹದೇವಪ್ಪನವರೇ ದಲಿತರ ಆಶಾಕಿರಣ. ಅವರನ್ನು ಕಡೆಗಣಿಸಿದರೆ ಮುಂದೆ ಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಭಾಗದಲ್ಲಿ ಕಷ್ಟವಾಗಲಿದೆ ಎಂದು ಎಚ್ಚರಿಸಿದರು.

ಪುತ್ರ ವ್ಯಾಮೋಹವೇ ಮಹದೇವಪ್ಪನವರ ಮಂತ್ರಿ ಸ್ಥಾನಕ್ಕೆ ತೊಡಕು ಎಂದ ಮುಖಂಡರು, 2ನೇ ಕಂತಿನಲ್ಲಿ ಮಹದೇವಪ್ಪನವರ ಹಿರಿತನವನ್ನು ಪರಿಗಣಿಸಿ ಸಚಿವ ಸ್ಥಾನ ನೀಡಲೇಬೇಕು. ಮಹದೇವಪ್ಪ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧವಾಗಿದ್ದೇವೆ ಎಂದರು.

Tags:
error: Content is protected !!