Mysore
22
overcast clouds

Social Media

ಮಂಗಳವಾರ, 09 ಜೂನ್ 2026
Light
Dark

ಪ್ರತ್ಯೇಕ ಪ್ರಕರಣ: ಮನೆ, ದೇವಸ್ಥಾನದಲ್ಲಿ ಕಳವು

ಹನಗೋಡು: ಹಾಡಹಗಲೇ ಮನೆ ಬೀಗ ಒಡೆದು ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಘಟನೆ ನಡೆದಿದೆ.

ಹನಗೋಡು ಹೋಬಳಿಯ ಕಡೇಮನುಗನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹೆಬ್ಬಾಳ ಗ್ರಾಮದ ಸಣ್ಣೇಗೌಡರ ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ 130 ಗ್ರಾಂ ಚಿನ್ನಾಭರಣ ಹಾಗೂ ೫ ಸಾವಿರ ರೂ. ನಗದನ್ನು ದೋಚಿದ್ದಾರೆ.

ಸಣ್ಣೇಗೌಡರು ಶನಿವಾರ ತಮ್ಮ ಸೊಸೆಯನ್ನು ಹೆರಿಗೆಗಾಗಿ ಪಿರಿಯಾಪಟ್ಟಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವೇಳೆ ಮನೆಯಲ್ಲಿ ಕಳ್ಳತನವಾಗಿದೆ.

ಹುಣಸೂರು ನಗರದ ಬನ್ನಿ ಬೀದಿಯಲ್ಲಿರುವ ಶ್ರೀ ಬಂಡಿ ಮಹಾ ಕಾಳಿಯಮ್ಮನ ದೇವಸ್ಥಾನದಲ್ಲಿ ದೇವರ ವಿಗ್ರಹದಲ್ಲಿದ್ದ ಚಿನ್ನಾಭರಣಗಳು ಮತ್ತು ದೇವಸ್ಥಾನದಲ್ಲಿ ಇಟ್ಟಿದ್ದ ಕಾಣಿಕೆ ಹುಂಡಿಯನ್ನು ಕೂಡ ಹೊತ್ತೊಯ್ದಿದ್ದಾರೆ.

ಅದೇ ದಿನ ರಾತ್ರಿ ನಗರದ ನಡು ಬೀದಿಯಲ್ಲಿರುವ ಕೋಲು ನೂರು ಮಾರಿಯಮ್ಮನ ದೇವಸ್ಥಾನದಲ್ಲೂ ದೇವರ ಮೇಲೆ ಇದ್ದ ತಾಳಿ ಮತ್ತು ಗೋಲಕ ಹುಂಡಿಯನ್ನು ದೋಚಿದ್ದಾರೆ.

ಈ ಬಗ್ಗೆ ನಗರ ಪೊಲೀಸ್ ಠಾಣೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:
error: Content is protected !!