Mysore
23
overcast clouds

Social Media

ಶನಿವಾರ, 06 ಜೂನ್ 2026
Light
Dark

ಮುಚ್ಚಿದ್ದ ಶಾಲೆ ಗ್ರಾಮಸ್ಥರಿಂದಲೇ ಆರಂಭ!

ಜಿಲ್ಲೆಯಲ್ಲಿ ಎಚ್‌.ಡಿ.ಕೋಟೆ ತಾಲ್ಲೂಕು ಪ್ರಥಮ ಸ್ಥಾನ ಗಳಿಸಿದ್ದೇ ಪೋಷಕರಿಗೆ ಪ್ರೇರೇಪಣೆ

ಮಂಜು ಕೋಟೆ

ಎಚ್‌.ಡಿ.ಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕು, ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆ ಯಲ್ಲಿ ಕಳೆದ ಎರಡು ವರ್ಷಗಳಿಂದ ಮುಚ್ಚಲಾಗಿದ್ದ ಬಸಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಗ್ರಾಮಸ್ಥರೇ ಒಗ್ಗೂಡಿ ಮತ್ತೆ ಪ್ರಾರಂಭಿಸಿದ್ದಾರೆ.

ಈ ಶಾಲೆಯು ಕಳೆದ 2 ವರ್ಷಗಳ ಹಿಂದೆ ವಿದ್ಯಾರ್ಥಿ ಗಳ ಕೊರತೆಯಿಂದ ಮುಚ್ಚಲ್ಪಟ್ಟಿತ್ತು. ಈ ಬಾರಿ ಶಿಕ್ಷಣಾಧಿ ಕಾರಿ ರಾಜು ನಾಯಕ್ ಮತ್ತು ಎಲ್ಲರ ಪರಿಶ್ರಮದಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲ್ಲೂಕು ಜಿಲ್ಲೆ ಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರಿಂದ ಸಂತಸಗೊಂಡ ಪೋಷಕರು ಆಸಕ್ತಿ ವಹಿಸಿ ಸರ್ಕಾರಿ ಶಾಲೆಯನ್ನು ಉಳಿ ಸಲು ಮುಂದಾದರು. ಈ ನಿಟ್ಟಿನಲ್ಲಿ ಗ್ರಾಮಸ್ಥರು ಗ್ರಾಮದಲ್ಲಿ ಸಭೆ ಸೇರಿ ಆಸಕ್ತಿ ವಹಿಸಿ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ಪ್ರಾರಂಭಿಸಬೇಕು ಎಂದು ನಿರ್ಧರಿಸಿದ್ದಾರೆ.

ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಹಲವಾರು ವಿದ್ಯಾರ್ಥಿಗಳನ್ನು ಕರೆತಂದು ಒಟ್ಟು 12 ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ, ಶಾಲೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ನಾಯಕ್‌ ಹಾಗೂ ಗ್ರಾಮಸ್ಥರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ನೌಕರರ ಸಮ್ಮುಖದಲ್ಲಿ ಮತ್ತೆ ಪ್ರಾರಂಭಿಸಿದ್ದಾರೆ.

ಶಾಲೆಗೆ ತಾತ್ಕಾಲಿಕವಾಗಿ ಉಷಾ ಎಂಬ ಶಿಕ್ಷಕರನ್ನು ನಿಯೋಜಿಸ ಲಾಗಿದೆ. ಶಾಲಾ ಪ್ರಾರಂಭದಲ್ಲಿ ಗ್ರಾಮದ ಮುಖಂಡರು, 12 ವಿದ್ಯಾರ್ಥಿಗಳು ಹಾಜರಿದ್ದರು. ಉಸ್ತುವಾರಿ ಸಿಆರ್‌ಪಿ ಗಿರೀಶ್ ಮೂರ್ತಿ ಅವರನ್ನು ಈ ಶಾಲೆಯ ಮೇಲುಸ್ತುವಾರಿ ನೋಡಿಕೊಳ್ಳಲು ಸೂಚಿಸಲಾಗಿದೆ. ವಿದ್ಯಾರ್ಥಿಗಳು, ಪೋಷಕರು ಸಡಗರದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.


ಎರಡು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಕೊರತೆಯಿಂದ ಹಿಂದಿನ ಬಿಇಒ ಅವರು ಶಾಲೆಯನ್ನು ಮುಚ್ಚಿಸಿದ್ದರು. ಗ್ರಾಮಸ್ಥರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದ್ದರಿಂದ ವಿದ್ಯಾರ್ಥಿ ಗಳ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಈ ಬಾರಿ ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿ ಉತ್ತಮವಾಗಿ, ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ತಾಲ್ಲೂಕು ಪ್ರಥಮ ಸ್ಥಾನ ಗಳಿಸಿದ್ದರಿಂದ ಗ್ರಾಮಸ್ಥರೇ ಸಭೆ ಸೇರಿ ಸರ್ಕಾರಿ ಶಾಲೆಯನ್ನು ಉಳಿಸಲು ನಿರ್ಧರಿಸಿ, ಖಾಸಗಿ ಶಾಲೆಗೆ ಸೇರಿಸಿದ್ದ ಮಕ್ಕಳನ್ನು ವಾಪಸ್‌ ಕರೆತಂದು, ಈ ಶಾಲೆಗೆ ಸೇರಿಸಿ ದ್ದಾರೆ. ಈಗ ಶಾಲೆಯು ಆರಂಭವಾಗಿದ್ದು, 12 ಮಂದಿ ಇದ್ದಾರೆ.
-ರಾಜು ನಾಯಕ್, ಬಿಇಒ


ಗ್ರಾಮದಲ್ಲಿ ನಮ್ಮ ಸರ್ಕಾರಿ ಶಾಲೆ ಪುನಾರಂಭ ಆಗಿರು ವುದು ಸಂತಸ ತಂದಿದೆ. ಈ ವರ್ಷ ಎಸ್ಎಸ್‌ಎಲ್‌ ಸಿ ಯಲ್ಲಿ ತಾಲ್ಲೂಕಿಗೆ ಉತ್ತಮ ಫಲಿತಾಂಶ ಬಂದಿರುವುದು ಸರ್ಕಾರಿ ಶಾಲೆಯಿಂದ ಈ ಕಾರಣಕ್ಕಾಗಿ ಊರಿನ ಎಲ್ಲರೂ ಒಗ್ಗಟ್ಟಾಗಿ ಸೇರಿ ಶಾಲೆ ಪ್ರಾರಂಭಿಸಲು ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಅವರು ಒಪ್ಪಿಕೊಂಡಿದ್ದರಿಂದ ನಮ್ಮ ಮಕ್ಕಳನ್ನು ಮತ್ತೆ ಸರ್ಕಾರಿ ಶಾಲೆಗೆ ಸೇರಿಸಿದ್ದೇವೆ.
-ಸೋಮಚಾರಿ,
ಪೋಷಕರು, ಬಸಾಪುರ


ಎರಡು ವರ್ಷಗಳಿಂದ ಸರಗೂರು ಮತ್ತು ಕೋಟೆ ತಾಲ್ಲೂಕಿನ ಖಾಸಗಿ ಶಾಲೆಗಳಿಗೆ ಅನೇಕ ವಿದ್ಯಾರ್ಥಿಗಳು ಹೋಗುತ್ತಿದ್ದರು. ಇಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಕೊರತೆಯಿತ್ತು. ಗ್ರಾಮದಲ್ಲಿ ಮತ್ತೆ ಶಾಲೆ ಪುನಾರಂಭವಾಗಿರುವುದರಿಂದ ಇಲ್ಲೇ ಉತ್ತಮ ವಿದ್ಯಾಭ್ಯಾಸ ಪಡೆಯುತ್ತೇವೆ. ಎಲ್ಲ ಸೌಕರ್ಯ ಕಲ್ಪಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಅವರು ಭರವಸೆ ನೀಡಿದ್ದಾರೆ.
ಗಾನವಿ, ಮೂರನೇ ತರಗತಿ ವಿದ್ಯಾರ್ಥಿನಿ

 

 

Tags:
error: Content is protected !!