Mysore
22
overcast clouds

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತಾಗಿದೆ ದಲಿತರ ಸ್ಥಿತಿ : ಮಾಜಿ ಸಚಿವ ಎನ್.ಮಹೇಶ್‌

n mahesh former minister

ಕೊಳ್ಳೇಗಾಲ : ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತಾಗಿದೆ ದಲಿತರ ಸ್ಥಿತಿ ಎಂದು ಮಾಜಿ ಸಚಿವ ಎನ್‌.ಮಹೇಶ್‌ ಮಾರ್ಮಿಕವಾಗಿ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಮುಖ್ಯಮಂತ್ರಿ ಎಂಬುದು ಕನಸಾಗಿದೆ. ದಲಿತರು ಎಲ್ಲಿಯವರೆಗೆ ಒಂದು ಪಕ್ಷದ ವೋಟ್‌ ಬ್ಯಾಂಕ್ ಆಗಿರ್ತಾರೋ ಅಲ್ಲಿಯವರೆಗೂ ಸ್ಥಾನಮಾನ ಸಿಗಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ ದಲಿತರು ಸಿಎಂ ಆಗ್ತಾರೆ ಅಂತ ದಲಿತರ ನಿರೀಕ್ಷೆ ಆಗಿತ್ತು. ಆದರೆ ಅದು ಸುಳ್ಳಾಗಿದೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗ್ತಾರೆ ಅಂತ ದಲಿತರು ಕಾಂಗ್ರೆಸ್ ಬೆಂಬಲಿಸಿದರು ಎಂದು ತಿಳಿಸಿದರು.

ಪರಮೇಶ್ವರ್ ಸಿಎಂ ಆಗಿ ಬಿಡ್ತಾರೆ ಅಂತ ಅವರನ್ನು ಸೋಲಿಸಲಾಯ್ತು. ಸಿಎಂ ಮಾಡ್ಲಿ ಬಿಡ್ಲಿ ದಲಿತರು ತಮ್ಮ ವೋಟ್‌ಬ್ಯಾಂಕ್ ಅಂತ ಕಾಂಗ್ರೆಸ್ ಅಂದುಕೊಂಡಿದೆ. ಈ ಸೂಕ್ಷ್ಮ ಅರ್ಥ ಆಗುವವರೆಗೂ ದಲಿತರಿಗೆ ಸ್ಥಾನಮಾನ ಸಿಗುತ್ತೆ ಎಂಬುದು ಕೇವಲ ಭ್ರಮೆ. ದಲಿತರು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ ಎಂದು ಸಲಹೆ ನೀಡಿದರು.

Tags:
error: Content is protected !!