Mysore
22
overcast clouds

Social Media

ಬುಧವಾರ, 20 ಮೇ 2026
Light
Dark

ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್‌ ಬ್ರೇಕ್

big shocking for ksrtc transport unions

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಸಾರಿಗೆ ಸಂಘಟನೆಗಳು ಮೇ.20ರಂದು ಕರೆ ನೀಡಿದ್ದ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ಅಂಕುಶ ಹಾಕಿದೆ.

ಮುಷ್ಕರ ನಡೆಸದಂತೆ ಖಡಕ್‌ ಸೂಚನೆ ನೀಡಿರುವ ಹೈಕೋರ್ಟ್ ಸರ್ಕಾರದ ಜೊತೆಗೆ ಮಾತುಕತೆ ನಡೆಸುವಂತೆ ಸೂಚನೆ ನೀಡಿದ್ದು, ವಿಚಾರಣೆಯನ್ನು ಮೇ.21ಕ್ಕೆ ಮುಂದೂಡಿಕೆ ಮಾಡಿದೆ.

ರಾಜ್ಯ ಸರ್ಕಾರಕ್ಕೂ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದ್ದು, ಸಾರಿಗೆ ಮುಖಂಡರ ಜೊತೆ ಮಾತುಕತೆ ನಡೆಸುವಂತೆ ಸೂಚನೆ ನೀಡಿದೆ.

Tags:
error: Content is protected !!