Mysore
37
scattered clouds

Social Media

ಶನಿವಾರ, 02 ಮೇ 2026
Light
Dark

ಯಾಲಕ್ಕೂರು, ಸುತ್ತಲಿನ ಗ್ರಾಮಗಳಿಗೆ ಬಂತು ಸಾರಿಗೆ ಬಸ್ಸು!

ಚಾಮರಾಜನಗರ: ತಾಲ್ಲೂಕಿನ ಯಾಲಕ್ಕೂರು ಹಾಗೂ ಸುತ್ತಮುತ್ತಲಿನ ಆರು ಗ್ರಾಮಗಳಿಗೆ ಸಾರಿಗೆ ಬಸ್ಸೇ ಇಲ್ಲ ಎಂದು ‘ಆಂದೋಲನ ಪತ್ರಿಕೆ’ಯಲ್ಲಿ ಈಚೆಗೆ ಪ್ರಕಟವಾಗಿದ್ದ ವರದಿಯ ಹಿನ್ನೆಲೆಯಲ್ಲಿ ಈ ಗ್ರಾಮಗಳಿಗೆ ಸಾರಿಗೆ ಬಸ್ ಬಿಡಲಾಗಿದೆ.

ಏಪ್ರಿಲ್ ೮ರಂದು ಈ ವಿಚಾರವಾಗಿ ಸಮಗ್ರವಾಗಿ ವರದಿ ಮಾಡಲಾಗಿತ್ತು. ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ಅವರು ಇಲಾಖೆ ಅಧಿಕಾರಿಗಳಿಂದ ಸರ್ವೇ ಮಾಡಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದರು.

ಅದರಂತೆ, ಸರ್ವೇ ಮಾಡಿಸಿ ಕಾಡಳ್ಳಿ, ಕಿರಗಸೂರು, ಭೋಗಾಪುರ, ಹನಹಳ್ಳಿ, ಮೂಕಳ್ಳಿ, ಸಪ್ಪಯ್ಯನಪುರ, ಯಾಲಕ್ಕೂರು, ಕುದೇರು, ಉಮ್ಮತ್ತೂರು, ಜನ್ನೂರು ಹೊಸೂರು, ಆಲ್ದೂರು ಮೂಲಕ ತಿ.ನರಸೀಪುರ ತಲುಪುವಂತೆ ಬಸ್ ವ್ಯವಸ್ಥೆ ಮಾಡಲಾಗಿದೆ.

ಬೆಳಿಗ್ಗೆ ೭.೧೫ಕ್ಕೆ ತಿ.ನರಸೀಪುರ ಬಿಟ್ಟು ಈ ಗ್ರಾಮಗಳ ಮೂಲಕ ಚಾಮರಾಜನಗರವನ್ನು ೯.೩೦ಕ್ಕೆ ತಲುಪುತ್ತದೆ. ಸಂಜೆ ೪.೩೦ಕ್ಕೆ ಚಾ.ನಗರ ನಿಲ್ದಾಣದಿಂದ ಹೊರಟು ಈ ಗ್ರಾಮಗಳ ಮೂಲಕ ತಿ.ನರಸೀಪುರ ತಲುಪಲಿದೆ. ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ಅವರು ‘ಆಂದೋಲನ ’ವರದಿಗೆ ಸ್ಪಂದಿಸಿ ಶನಿವಾರದಿಂದಲೇ (ಏ.೨೫) ಬಸ್ ಬಿಟ್ಟಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕೋಶಾಧ್ಯಕ್ಷರಾದ ಯಾಲಕ್ಕೂರು ಲಿಂಗರಾಜು ಸಂತಸ ವ್ಯಕ್ತಪಡಿಸಿದರು.

Tags:
error: Content is protected !!