Mysore
22
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ನಮ್ಮ ಹಕ್ಕು ಕಸಿಯಲು ಅಮೆರಿಕ ಯಾರು? ; ಟ್ರಂಪ್‌ ವಿರುದ್ಧ ಇರಾನ್‌ ವಾಗ್ದಾಳಿ

ಟೆಹ್ರಾನ್ : ಇರಾನ್‌ನ ಪರಮಾಣು ಯೋಜನೆಯ ಸುತ್ತಲಿನ ಅಂತಾರಾಷ್ಟ್ರೀಯ ಬಿಕ್ಕಟ್ಟು ಮತ್ತೆ ತಾರಕಕ್ಕೇರಿದೆ. ಒಂದು ರಾಷ್ಟ್ರದ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು ಅಮೆರಿಕ ಯಾರು? ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚಿನ ಮಾತು ಕತೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ತನ್ನ ಪರಮಾಣು ಹಕ್ಕುಗಳನ್ನು ತ್ಯಜಿಸಬೇಕು ಎಂದು ಪ್ರತಿಪಾದಿಸಿದ್ದರು. ಇದಕ್ಕೆ ಕಠಿಣವಾಗಿ ಪ್ರತಿಕ್ರಿಯಿಸಿರುವ ಪೆಜೆಶ್ಕಿಯಾನ್, ಟ್ರಂಪ್ ಅವರು ಇರಾನ್ ತನ್ನ ಪರಮಾಣು ಹಕ್ಕುಗಳನ್ನು ಬಳಸಬಾರದು ಎಂದು ಹೇಳುತ್ತಾರೆ. ಆದರೆ ನಾವು ಮಾಡಿದ ಅಪರಾಧ ಏನು ಎಂಬುದನ್ನು ಅವರು ಹೇಳುತ್ತಿಲ್ಲ. ಒಂದು ಸಾರ್ವಭೌಮ ರಾಷ್ಟ್ರದ ಹಕ್ಕುಗಳನ್ನು ಕಿತ್ತುಕೊಳ್ಳಲು ಅವರ ಅಧಿಕಾರವೇನು ಎಂದು ಪ್ರಶ್ನಿಸಿದ್ದಾರೆ.

ಸಂಘರ್ಷದ ಹಾದಿ ಮತ್ತು ಮಾತುಕತೆ ೨೦೨೬ರ ಫೆಬ್ರವರಿ ಕೊನೆಯಲ್ಲಿ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ದೊಡ್ಡ ಮಟ್ಟದ ಮಿಲಿಟರಿ ಸಂಘರ್ಷ ಆರಂಭವಾಯಿತು. ತಿಂಗಳು ಕಾಲ ನಡೆದ ಭೀಕರ ಸಂಘರ್ಷದ ಬಳಿಕ ಈಗ ಕದನ ವಿರಾಮ ಸ್ಥಿತಿ ಇದೆ. ಪ್ರಸ್ತುತ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿವೆ. ಇರಾನ್‌ನ ಪರಮಾಣು ಯೋಜನೆಗಳನ್ನು ನಿಲ್ಲಿಸಬೇಕು, ಪರಮಾಣು ಶಸ್ತ್ರಾಸ್ತ್ರ ತಯಾರಿಕೆ ತ್ಯಜಿಸಬೇಕು ಎಂಬುದು ಅಮೆರಿಕದ ಹಠ. ಆದರೆ, ಶಾಂತಿ ಮತ್ತು ವಿದ್ಯುತ್ ಉದ್ದೇಶಕ್ಕೆ ಪರಮಾಣು ಬಳಸುತ್ತಿರುವುದಾಗಿ ಇರಾನ್ ಹೇಳಿದೆ. ಪರಮಾಣು ಶಕ್ತಿ ಉತ್ಪಾದನೆಗೆ ಬೇಕಾದ ಯುರೇನಿಯಂ ಎನ್‌ರಿಚ್‌ಮೆಂಟ್ ಅನ್ನು ಇರಾನ್ ಸಾಕಷ್ಟು ಮಾಡಿದೆ. ಇನ್ನು ಸ್ವಲ್ಪ ಮಟ್ಟದ ಯುರೇನಿಯಂ ಎನ್‌ರಿಚ್‌ಮೆಂಟ್ ಮಾಡಿದರೆ ಅದು ಪರಮಾಣು ಶಸ್ತ್ರ ತಯಾರಿಕೆಗೆ ಉಪಯೋಗಿಸಬಲ್ಲ ದರ್ಜೆಯದ್ದಾಗಿರುತ್ತದೆ. ಈ ವಿಚಾರಕ್ಕೆ ಅಮೆರಿಕ ತಕರಾರು ತೆಗೆದಿದೆ. ಸದ್ಯ ೧೫ ದಿನಗಳ ಕದನ ವಿರಾಮವು ಏ. ೨೩ರಂದು ಅಂತ್ಯಗೊಳ್ಳಲಿದೆ. ಈ ಮಧ್ಯೆ ತನ್ನ ಪರಮಾಣು ಹಕ್ಕು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಇರಾನ್ ಅಧ್ಯಕ್ಷರು ಹೇಳಿರುವುದು, ಈ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.

Tags:
error: Content is protected !!