Mysore
37
scattered clouds

Social Media

ಶನಿವಾರ, 02 ಮೇ 2026
Light
Dark

ಕಾಪಿ ಮಾಡು ಎಂದು ಹೇಳಿದ ಗುರುಗಳ ಮಾತನ್ನು ಧಿಕ್ಕರಿಸಿದೆ, ಆದರೆ ಅವರನ್ನು ದ್ವೇಷಿಸಲಿಲ್ಲ

ನಮ್ಮ ತಂದೆ ಪೋರ್‌ಬಂದರನ್ನು ಬಿಟ್ಟು ರಾಜ ಕೋಬಿಯ ರಾಜಾಸ್ಥಾನಿಕ ನ್ಯಾಯಾಲಯದ ಸದಸ್ಯರಾಗಿ ಹೊರಟಾಗ, ನನಗೆ ಕೇವಲ ಏಳು ವರ್ಷಗಳು. ಅಲ್ಲಿ ನನ್ನನ್ನು ಪ್ರಾಥಮಿಕ ಶಾಲೆಗೆ ಸೇರಿಸಿದರು. ಆ ದಿನಗಳಲ್ಲಿ ನನಗೆ ಬೋಧಿಸಿದ ಉಪಾಧ್ಯಾಯರ ಹೆಸರುಗಳು, ಮೊದಲಾದ ವಿವರಗಳೆಲ್ಲ ನನಗೆ ಚೆನ್ನಾಗಿ ನೆನಪಿದೆ. ಪೋರ್‌ಬಂದರಿನಲ್ಲಿ ಇದ್ದಂತೆಯೇ ಇಲ್ಲಿಯೂ ನನ್ನ ವಿದ್ಯಾ ಭ್ಯಾಸ ವಿಷಯದಲ್ಲಿ ಹೇಳಬೇಕಾದ ಹೆಚ್ಚಿನದೇನೂ ಇಲ್ಲ. ನಾನು ಸಾಮಾನ್ಯ ಯೋಗ್ಯತೆಯುಳ್ಳ ವಿದ್ಯಾರ್ಥಿಯಾಗಿ ದ್ದೆನು. ಆ ಪಾಠ ಶಾಲೆಗೆ ಸಮೀಪದಲ್ಲಿದ್ದ ಮತ್ತೊಂದು ಶಾಲೆ ಮುಗಿಸಿ ಮುಂದೆ ಪ್ರೌಢಶಾಲೆಯನ್ನು ಮುಟ್ಟುವ ವೇಳೆಗೆ ನನಗೆ ಹನ್ನೆರಡು ವರುಷ ತುಂಬಿತ್ತು. ಆ ಕಾಲದಲ್ಲಿ ನಾನು ಶಿಕ್ಷಕರಿಗಾಗಲಿ ಸ್ನೇಹಿತರಿಗಾಗಲಿ ಎಂದೂ ಸುಳ್ಳು ಹೇಳಿದ ನೆನಪಿಲ್ಲ. ನಾನು ಬಹಳ ನಾಚಿಕೆಯೆ ಸ್ವಭಾವದವನಾಗಿದ್ದೆನು. ಯಾರ ಜತೆಗೂ ಸೇರುತ್ತಿರಲಿಲ್ಲ. ಗಂಟೆ ಹೊಡೆಯುವ ಹೊತ್ತಿಗೆ ಶಾಲೆಗೆ ಹೋಗುವುದು, ಶಾಲೆ ಮುಗಿಯುತ್ತಲೇ ಮನೆಗೆ ಓಡುವುದು, ಇದು ನನ್ನ ದಿನನಿತ್ಯದ ಅಭ್ಯಾಸವಾಗಿತ್ತು. ನಾನು ನಿಜವಾಗಿಯೂ ಓಡಿಯೇ ಮನೆ ಸೇರುತ್ತಿದ್ದೆ. ಏಕೆಂದರೆ ನನಗೆ ಯಾರೊಂದಿಗೂ ಮಾತನಾಡುವ ಧೈರ್ಯವಿರಲಿಲ್ಲ.

ಪ್ರೌಢಶಾಲೆಯ ಮೊದಲನೆಯ ವರುಷದ ಪರೀಕ್ಷೆಯ ವೇಳೆಯಲ್ಲಿ ನಡೆದ ಘಟನೆಯೊಂದನ್ನು ಹೇಳಬೇಕು. ಇನ್‌ಸ್ಪೆಕ್ಟರ್ ಮಿ. ಗೈಲ್ಸ್ ಪರಿಶೀಲನೆಗಾಗಿ ಶಾಲೆಗೆ ಬಂದಿದ್ದರು. ಅವರು ಮೊದಲನೆಯ ತರಗತಿಯ ವಿದ್ಯಾರ್ಥಿಗಳಿಗೆ ಐದು ಪದಗಳನ್ನು ಬರೆಯಲು ಕೊಟ್ಟರು. ಅವುಗಳ ಪೈಕಿ ಕೆಟಲ್(ಓಛಿಠಿಠ್ಝಿಛಿ) ಎಂಬ ಪದವೂ ಒಂದು. ನಾನು ಅದನ್ನು ತಪ್ಪಾಗಿ ಬರೆದೆ. ನಮ್ಮ ಉಪಾಧ್ಯಾಯರು ತಮ್ಮ ಪಾದರಕ್ಷೆಯ ತುದಿಯಿಂದ ನನ್ನನ್ನು ಎಚ್ಚರಿಸಲು ಪ್ರಯತ್ನಿಸಿದರು. ನಾನು ಆ ಸೂಚನೆಯಂತೆ ನಡೆಯಲಿಲ್ಲ. ಮುಂದಿನ ಹುಡುಗನ ಸ್ಲೇಟನ್ನು ನೋಡಿಕೊಂಡು ನನ್ನ ತಪ್ಪನ್ನು ತಿದ್ದಿಕೊಳ್ಳಬೇಕೆಂಬುದು ನಮ್ಮ ಉಪಾಧ್ಯಾಯರ ಉದ್ದೇಶ. ಅದು ನನಗೆ ಒಪ್ಪಿಗೆಯಾಗಲಿಲ್ಲ. ಏಕೆಂದರೆನಾವು ಕಾಪಿ ಮಾಡದಂತೆ ನೋಡಿಕೊಳ್ಳುವುದೇ ಉಪಾಧ್ಯಾಯರ ಕೆಲಸವೆಂದು ನಾನು ತಿಳಿದಿದ್ದೆ. ಇದರಪರಿಣಾಮವಾಗಿ ನನ್ನನ್ನು ಹೊರತು ಪಡಿಸಿ ಉಳಿದ ಹುಡುಗರೆಲ್ಲ ಐದು ಪದಗ ಳನ್ನೂ ಸರಿಯಾಗಿ ಬರೆದಿದ್ದರು. ನಾನೊ ಬ್ಬನೇ ದಡ್ಡ. ಇದಾದ ಮೇಲೆ, ಉಪಾಧ್ಯಾಯರು ನನ್ನ ಮೂರ್ಖತನವನ್ನು ನನಗೆ ತೋರಿಸುವುದಕ್ಕೆ ಪ್ರಯತ್ನಪಟ್ಟರು.ಅದರಿಂದ ಅವರಿಗೆ ವೃಥಾ ಶ್ರಮವಾಯಿತೇ ಹೊರತು, ಕಾಪಿ ಮಾಡುವ ಕಲೆ ನನಗೆ ಕೊನೆಗೂ ಬರಲೇ ಇಲ್ಲ.

ಇಷ್ಟಾದರೂ ಉಪಾಧ್ಯಾಯರಲ್ಲಿ ನನಗಿದ್ದ ಗೌರವ, ಕಿಂಚಿತ್ತೂ ಕಡಿಮೆಯಾಗಲಿಲ್ಲ. ಪಠ್ಯಪುಸ್ತಕಗಳ ಹೊರತು ಬೇರೆ ಏನನ್ನೂ ಓದುವುದು ಸಾಧಾರಣವಾಗಿ ನನಗೆ ಸೇರುತ್ತಿರಲಿಲ್ಲ. ನಿತ್ಯದ ಪಾಠಗಳನ್ನಂತೂ ಓದಲೇಬೇಕಾಗಿತ್ತು. ಉಪಾಧ್ಯಾಯರು ನನ್ನನ್ನು ಗದರಿಸುವುದು ನನಗೆ ಇಷ್ಟವಿರಲಿಲ್ಲ. ಅವರಿಗೆ ಮೋಸ ಮಾಡಲು ನನಗೂ ಇಷ್ಟ ಇರಲಿಲ್ಲ. ಆದುದರಿಂದ ಪಾಠವನ್ನೇನೊ ಓದುತ್ತಿದ್ದೆನು. ಆದರೆ ಪಾಠದಲ್ಲಿ ಮನಸ್ಸು ಇರುತ್ತಿರಲಿಲ್ಲ.

ಮನಸಿಗೆ ನಾಟಿದ ಎರಡು ನಾಟಕಗಳು: 

ಆದರೆ ಹೇಗೋ ನಮ್ಮ ತಂದ ಕೊಂಡುಕೊಂಡು ಬಂದಿದ್ದ ಒಂದು ಪುಸ್ತಕ ನನ್ನ ಕಣ್ಣಿಗೆ ಬಿತ್ತು. ಅದರ ಹೆಸರು ‘ಶ್ರವಣ ಪಿತೃ ಭಕ್ತಿ ನಾಟಕ’. ಅದನ್ನು ನಾನು ಅತ್ಯಂತ ಆಸಕ್ತಿಯಿಂದ ಓದಿದೆನು. ಶ್ರವಣ ತನ್ನ ಕುರುಡು ತಂದೆ ತಾಯಿಯರನ್ನು ಅಡ್ಡೆಯಲ್ಲಿ ಕೂರಿಸಿಕೊಂಡು ಅದನ್ನು ಹೆಗಲಿನ ಮೇಲೆ ಹೊತ್ತುಕೊಂಡು ಯಾತ್ರೆಗಾಗಿ ಹೋಗುತ್ತಿದ್ದ ಚಿತ್ರ ನನ್ನ ಅಂತರಂಗದಲ್ಲಿ ಶಾಶ್ವತವಾಗಿ ಅಂಕಿತವಾಯಿತು. ಆ ಕಾಲದಲ್ಲಿ ಒಂದು ನಾಟಕ ಮಂಡಳಿಯವರು ಪ್ರದರ್ಶಿಸುತ್ತಿದ್ದ ನಾಟಕವೊಂದನ್ನು ನೋಡಲು ನಮ್ಮ ತಂದೆಯವರು ನನಗೆ ಅನುಮತಿ ನೀಡಿದ್ದರು. ಆ ನಾಟಕ, ಹರಿಶ್ಚಂದ್ರ ನಾಟಕ. ಅದು ನನ್ನ ಮನಸ್ಸನ್ನು ಸೂರೆಗೊಂಡಿತು. ಅದನ್ನು ಎಷ್ಟು ನೋಡಿದರೂ ನನಗೆ ತೃಪ್ತಿಯೇ ಆಗಲಿಲ್ಲ. ಲೆಕ್ಕವಿಲ್ಲದಷ್ಟು ಸಲ ನಾನೇ ಹರಿಶ್ಚಂದ್ರನಾಗಿ ಆ ನಾಟಕವನ್ನು ಅಭಿನಯಿಸಿಕೊಂಡೆ. ಎಲ್ಲರೂ ಏಕೆ ಹರಿಶ್ಚಂದ್ರನಂತೆ ಸತ್ಯಸಂಧರಾಗಿರಬಾ ರದು? ಇದೇ ಹಗಲೂ ರಾತ್ರಿ ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದ ಪ್ರಶ್ನೆ. ಸತ್ಯವನ್ನು ಅನುಸರಿಸಬೇಕು. ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ, ಆಪತ್ತುಗಳನ್ನೆಲ್ಲ ನಾನೂ ಪಡಬೇಕು. ಇದೊಂದೇ ನನ್ನ ಮನಸ್ಸಿನಲ್ಲಿ ಸ್ಛೂರ್ತಿ ತುಂಬಿದ ಆದರ್ಶ.

Tags:
error: Content is protected !!