Mysore
23
few clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

ಸಣ್ಣ ಮಠವನ್ನು ದೊಡ್ಡ ಮರವನ್ನಾಗಿ ಬೆಳೆಸಿದ್ದು ಬಾಲಗಂಗಾಧರನಾಥರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ತ್ರಿವಿಧ ದಾಸೋಹದ ಮೂಲಕ ಆದಿಚುಂಚನಗಿರಿ ಮಠ ಪ್ರಸಿದ್ಧಿ ಪಡೆದಿದೆ. ಬಾಲಗಂಗಾಧರನಾಥರ ಭೈರವೈಕ್ಯ ಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿ ಅವರು ಆಗಮಿಸಿದ್ದು ಸಂತಸ ತಂದಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಬಣ್ಣಿಸಿದರು.

ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಎಚ್‌ಡಿಕೆ, ಸಣ್ಣ ಮಠವನ್ನು ದೊಡ್ಡ ಮರವನ್ನಾಗಿ ಬೆಳೆಸಿದ್ದು, ಬಾಲಗಂಗಾಧರನಾಥರು. ರೈತರ ಮಕ್ಕಳ ಜ್ಞಾನಾರ್ಜನೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಜೋಳಿಗೆಯನ್ನು ಹಿಡಿದು ಆ ಮಠ ಕಟ್ಟಿದ್ದಾರೆ ಎಂದು ಸ್ಮರಿಸಿದರು.

ಬಾಲಗಂಗಾಧರನಾಥರ ಭೈರವೈಕ್ಯ ಮಂದಿರ ಉದ್ಘಾಟನೆಗೆ ಮೋದಿ ಅವರು ಆಗಮಿಸಿರುವುದು ಸಂತಸ. ಮೋದಿಯವರ ನಾಯಕತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿದರು.

 

Tags:
error: Content is protected !!