Mysore
22
overcast clouds

Social Media

ಶುಕ್ರವಾರ, 19 ಜೂನ್ 2026
Light
Dark

ಪಾಕ್‌ ಜನತೆಗೆ ಮತ್ತೊಂದು ಶಾಕ್:‌ ವಿದ್ಯುತ್‌ ದರ ದುಪ್ಪಟ್ಟು ಹೆಚ್ಚಳ

ಇಸ್ಲಾಮಾಬಾದ್:‌ ಇಂಧನ ಬೆಲೆ ಏರಿಕೆ ನಂತರ ಪಾಕಿಸ್ತಾನ ಈಗ ವಿದ್ಯುತ್‌ ದರವನ್ನು ದುಪ್ಪಟ್ಟು ಹೆಚ್ಚಿಸಿದೆ. ಮಾಸಿಕ ಇಂಧನ ವೆಚ್ಚ ಹೊಂದಾಣಿಕೆಯ ಅಡಿಯಲ್ಲಿ ಪಾಕಿಸ್ತಾನವು ಪ್ರತಿ ಯೂನಿಟ್‌ಗೆ 1.42 ರೂಗಳಷ್ಟು ವಿದ್ಯುತ್‌ ದರವನ್ನು ಹೆಚ್ಚಿಸಿದೆ.

ಪಾಕಿಸ್ತಾನದ ರಾಷ್ಟ್ರೀಯ ವಿದ್ಯುತ್‌ ನಿಯಂತ್ರಣ ಪ್ರಾಧಿಕಾರ ಫೆಬ್ರವರಿ.2026ರ ಇಂಧನ ಶುಲ್ಕಗಳಲ್ಲಿನ ವ್ಯತ್ಯಾಸವನ್ನು ಉಲ್ಲೇಖಿಸಿದೆ. ವಿದ್ಯುತ್‌ ಸುಂಕವನ್ನು ಹೆಚ್ಚಿಸುವ ಮೂಲಕ ದೇಶದ ಗ್ರಾಹಕರಿಗೆ ದೊಡ್ಡ ಆಘಾತವನ್ನು ನೀಡಿದೆ.

ಸದ್ಯಕ್ಕೆ ಜಾಗತಿಕ ಇಂಧನ ಭವಿಷ್ಯವು ಅಸ್ಪಷ್ಟವಾಗಿಯೇ ಉಳಿದಿದೆ. ಹೀಗಾಗಿ ಈ ತಿಂಗಳು ಪಾಕಿಸ್ತಾನಿಗಳು ಇಂಧನ ಮತ್ತು ವಿದ್ಯುತ್‌ಗಾಗಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ದೇಶದ ಸಂಕಷ್ಟದಲ್ಲಿರುವ ಉದ್ಯಮದ ಮೇಲೂ ಇದರ ಪರಿಣಾಮ ಉಂಟಾಗಲಿದೆ.

 

Tags:
error: Content is protected !!