Mysore
29
overcast clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಹನೂರು: ಚಿರತೆ ದಾಳಿಗೆ ಹಸುವಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಚಿರತೆ ದಾಳಿ ನಡೆಸಿದ ಪರಿಣಾಮ ಹಸು ತೀವ್ರವಾಗಿ ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಮಹಾಲಿಂಗನಕಟ್ಟೆಯಲ್ಲಿ ನಡೆದಿದೆ.

ಹನೂರು ತಾಲ್ಲೂಕಿನ ಶಿರಗೋಡು ಗ್ರಾಮದ ರೈತ ಮಹದೇವಸ್ವಾಮಿ ಎಂಬುವವರ ಹಸುವನ್ನು ಚಿರತೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ.

ಮಹಾಲಿಂಗನಕಟ್ಟೆಯ ಬಳಿ ಇರುವ ತೋಟದಲ್ಲಿ ವಾಸವಿದ್ದು, ಮನೆಯ ಮುಂಭಾಗ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಹಸುವಿನ ರೋಧನೆ ಕೇಳಿ ರೈತ ಹೊರಬಂದಾಗ ಬೆದರಿದ ಚಿರತೆ ಕಾಲ್ಕಿತ್ತಿದೆ.

ಕಳೆದ 15 ದಿನಗಳ ಹಿಂದೆ 55 ಸಾವಿರಕ್ಕೆ ಈ ಹಸುವನ್ನು ಖರೀದಿ ಮಾಡಲಾಗಿತ್ತು. ಈಗ ಹಸು ನಡೆಯಲಾಗದೇ ರೋಧಿಸುತ್ತಿದೆ. ಹಸು ಮೃತಪಟ್ಟರಷ್ಟೇ ಪರಿಹಾರ ಎಂದು
ಅರಣ್ಯ ಅಧಿಕಾರಿಗಳು ಹೇಳುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದಾರೆ.

 

Tags:
error: Content is protected !!