Mysore
26
broken clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಓದುಗರ ಪತ್ರ: ಹಗಲು ದರೋಡೆಯಲ್ಲದೆ ಇನ್ನೇನು?

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ವಾಣಿಜ್ಯ ಸಿಲಿಂಡರ್ ಅಭಾವ ಇರಬಹುದು. ಇದನ್ನೇ ನೆಪ ಮಾಡಿಕೊಂಡು, ಕೆಲವು ಹೋಟೆಲ್ನವರು, ಸಣ್ಣ – ಪುಟ್ಟ ಪೆಟ್ಟಿಗೆ ಅಂಗಡಿಯಲ್ಲಿ ಕಾಫಿ -ಟೀ ಮಾರಾಟ ಮಾಡು ವವರು ಪ್ರತಿ ಕಪ್ ಕಾಫಿ – ಟೀ ಗೆ ೫ ರೂ. ಹೆಚ್ಚಳ ಮಾಡಿರುವುದು ಒಂದು ರೀತಿಯಲ್ಲಿ ಹಗಲು ದರೋಡೆ ಎಂಬಂತಾಗಿದೆ. ಹೋಟೆಲ್‌ಗೆ ಬರುವ ಗ್ರಾಹಕರು ವಿಽ ಇಲ್ಲದೆ ಇದನ್ನು ಒಪ್ಪಿಕೊಳ್ಳಬೇಕಾಗಿದೆ. ಸಾಧಾರಣವಾಗಿ ಒಂದು ಲೀಟರ್ ಹಾಲಿನಲ್ಲಿ ಕನಿಷ್ಠ ೧೦ ಕಪ್ ಕಾಫಿ ಅಥವಾ ಟೀ ಮಾಡಬಹುದು ಎಂದು ಹೋಟೆಲ್ ಮಾಲೀಕರೇ ಹೇಳುತ್ತಾರೆ. ವಾಣಿಜ್ಯ ಸಿಲಿಂಡರ್ ಅಭಾವ ಹೇಳಿಕೊಂಡು ಹೋಟೆಲ್‌ನವರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಸಂಬಂಧಿಸಿದವರು ಇತ್ತ ಗಮನಹರಿಸಬೇಕಾಗಿದೆ.

 -ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು

Tags:
error: Content is protected !!