Mysore
25
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಓದುಗರ ಪತ್ರ: ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯಿತಿ

ಸೌಲಭ್ಯ ಮತ್ತೆ ಮುಂದುವರಿಯಲಿ ಕಳೆದ ಆರ್ಥಿಕ ವರ್ಷದಲ್ಲಿ (೨೦೨೫-೨೬), ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ರೂ.೪೪೯.೧೩ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿರುವುದಾಗಿ ಮೈಸೂರು ರೈಲ್ವೆ ಇಲಾಖೆಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದು ಮೈಸೂರು ವಿಭಾಗದಲ್ಲಿ ಇತಿಹಾಸದ ಅತಿ ಹೆಚ್ಚು ಆದಾಯ ಗಳಿಸಿರುವುದಾಗಿ ಹೇಳಿದ್ದಾರೆ. ಇದು ಇಲಾಖೆಗೆ ಸಂತೋಷಕರ ವಿಚಾರವಾಗಿ ರಬಹುದು. ಇದೇ ರೀತಿ ಹಲವು ರೈಲ್ವೆ ವಿಭಾಗಗಳು ಲಾಭ ಗಳಿಸಿರಬಹುದು. ಆದರೆ ರೈಲ್ವೆ ಇಲಾಖೆಯು ಕಳೆದ ಹದಿನೈದು ವರ್ಷಗಳಿಂದ ಹಿರಿಯ ನಾಗರಿಕರಿಗೆ ರೈಲ್ವೇ ಪ್ರಮಾಣದಲ್ಲಿ ನೀಡುತ್ತಿದ್ದ ಶೇ.೩೦ ರಷ್ಟು ರಿಯಾಯಿತಿಯನ್ನು ಕಳೆದ ಐದು ವರ್ಷಗಳಿಂದ ಅಂದರೆ ದೇಶದಲ್ಲಿ ಕೊರೋನ ಸಾಂಕ್ರಾಮಿಕ ರೋಗ ದೇಶದಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಹಿರಿಯ ನಾಗರಿಕರ ಈ ರಿಯಾಯಿತಿ ದರವನ್ನು ರದ್ದುಪಡಿಸಿತು. ಈಗ ದೇಶದಲ್ಲಿ ಕೊರೋನ ಮಾಯವಾಗಿ ಐದು ವರ್ಷಗಳೇ ಕಳೆದಿವೆ. ರೈಲ್ವೆ ಎಲ್ಲ ವಿಭಾಗಗಳು ನೂರಾರು ಕೋಟಿ ರೂ.ಲಾಭದಲ್ಲಿವೆ. ಆದರೂ ಹಿರಿಯ ನಾಗರಿಕರಿಗೆ ಇಲಾಖೆಯು ಹಿಂದೆ ಇದ್ದ ರಿಯಾಯಿತಿ ದರವನ್ನು ನೀಡುತ್ತಿಲ್ಲ. ರೈಲ್ವೆ ಸಚಿವರು ಈ ಬಗ್ಗೆ ತುರ್ತು ಗಮನಹರಿಸಿ ಈ ಹಿಂದೆ ನೀಡುತ್ತಿದ್ದ ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣದಲ್ಲಿ ಮತ್ತೆ ರಿಯಾಯಿತಿ ಸೌಲಭ್ಯ ಮುಂದುವರಿಯುಂತೆ ಕ್ರಮ ಕೈಗೊಳ್ಳಬೇಕು.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು

Tags:
error: Content is protected !!