Mysore
31
few clouds

Social Media

ಬುಧವಾರ, 15 ಜುಲೈ 2026
Light
Dark

2 ಅಥವಾ ಮೂರು ವಾರಗಳಲ್ಲಿ ಯುದ್ಧ ಅಂತ್ಯ: ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್:‌ ಇನ್ನು ಎರಡು ಅಥವಾ ಮೂರು ವಾರಗಳಲ್ಲಿ ಯುದ್ಧ ಅಂತ್ಯಗೊಳ್ಳಲಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ದೇಶವನ್ನು ಉದ್ದೇಶಿಸಿ ಸುಮಾರು 18 ನಿಮಿಷಗಳ ಕಾಲ ಮಾತನಾಡಿದ ಡೊನಾಲ್ಡ್‌ ಟ್ರಂಪ್‌ ಅವರು, ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ವಿರುದ್ಧ ವಾಗ್ದಾಳಿ ನಡೆಸಿ, ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ.

ಈ ಹೋರಾಟದಲ್ಲಿ ಅಮೇರಿಕಾಕ್ಕೆ ಸಾಥ್‌ ನೀಡುತ್ತಿರುವ ಇಸ್ರೇಲ್‌ ಅನ್ನು ಟ್ರಂಪ್‌ ವಿಶೇಷವಾಗಿ ಶ್ಲಾಘಿಸಿದ್ದಾರೆ. ಇಸ್ರೇಲ್‌ನ ಸೈನಿಕರು ಹಾಗೂ ನಾಯಕತ್ವದ ಧೈರ್ಯವನ್ನು ಅವರು ಕೊಂಡಾಡಿದ್ದಾರೆ.

ಒಬಾಮಾ ಅವರ ವಿದೇಶಾಂಗ ನೀತಿಗಳು ಇಂದಿನ ಪರಿಸ್ಥಿತಿಗೆ ಕಾರಣ. ಒಬಾಮಾ ಅವರ ನೇತೃತ್ವದಲ್ಲಿ ನಡೆದ ಇರಾನ್‌ ಅಣು ಒಪ್ಪಂದವು ಒಂದು ದುರಂತ. ಈ ಒಪ್ಪಂದವನ್ನು ನಾನು ರದ್ದುಗೊಳಿಸದಿದ್ದರೆ ಇರಾನ್‌ ಈಗಾಗಲೇ ಅಣ್ವಸ್ತ್ರಗಳನ್ನು ತಯಾರಿಸಿರುತ್ತಿತ್ತು. ಅದು ಇಡೀ ಮಧ್ಯಪ್ರಾಚ್ಯದ ವಿನಾಶಕ್ಕೆ ಕಾರಣವಾಗುತ್ತಿತ್ತು ಎಂದು ಹೇಳಿದರು.

Tags:
error: Content is protected !!