Mysore
25
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಏಪ್ರಿಲ್ 1ರಿಂದ ಜಾರಿ ಟೋಲ್‌ ದರ ಹೆಚ್ಚಳ ; ಮೈ-ಬೆಂ ಹೆದ್ದಾರಿ ಪ್ರಯಾಣವೂ ದುಬಾರಿ

ಬೆಂಗಳೂರು : ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇಕಡಾ 3 ರಿಂದ 5ರಷ್ಟು ಟೋಲ್ ದರ ಹೆಚ್ಚಳವಾಗಲಿದೆ.

ವಾರ್ಷಿಕ ಹಣದುಬ್ಬರ ಆಧಾರಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಣಯ ಮತ್ತು ಸಂಗ್ರಹ) ನಿಯಮ 2008ರ ಅನ್ವಯ ಪ್ರತಿ ವರ್ಷ ಟೋಲ್‌ದರ ಶೇ.3 ರಿಂದ ಶೇ.5ರವರೆಗೆ ಹೆಚ್ಚಳ ಆಗಲಿದೆ. ಕಳೆದ ಎರಡು ವರ್ಷಗಳಿಂದ ಇದೇ ರೀತಿ ಟೋಲ್ ದರ ಏರಿಕೆಯಾಗಿತ್ತು.

ಈಗಾಗಲೇ ಎನ್‌ಎಚ್‌ಐಎ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಫಾಸ್ಟ್ಯಾಗ್ ಪಾಸ್ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಖಾಸಗಿ ಕಾರು, ಜೀಪ್, ವ್ಯಾನ್ ಸೇರಿದಂತೆ ವಾಣಿಜ್ಯೇತರ ವಾಹನ ಬಳಕೆ ಮಾಲೀಕರು ಇನ್ನು ಮುಂದೆ ವಾರ್ಷಿಕ ಪಾಸ್‌ಗಳನ್ನು 3,000ರೂ. ಬದಲಿಗೆ, 3,075 ರೂ.ಪಾವತಿಸಿ ಖರೀದಿಸಬೇಕಾಗಿದೆ. ಇದೀಗ ಪ್ರತಿ ವರ್ಷದಂತೆ ಈ ವರ್ಷವೂ ಏಪ್ರಿಲ್ 1 ರಿಂದ ರಾಜ್ಯದ ಎಲ್ಲಾ ಹೆದ್ದಾರಿಗಳಲ್ಲಿ ಟೋಲ್ ದರ ಹೆಚ್ಚಾಗಿರುವುದು ವಾಹನ ಸವಾರರಿಗೆ ಹೊರೆಯಾಗಲಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ವಾಹನ ಸಂಚಾರ ಪ್ರಾರಂಭವಾದಾಗಿನಿಂದ ಇದು ನಾಲ್ಕನೇ ಬಾರಿ ಬೆಲೆ ಏರಿಕೆಯಾಗಿದೆ. 2023 ರ ಏಪ್ರಿಲ್ 1ರಿಂದ ಹೆದ್ದಾರಿ ಸಂಚಾರಕ್ಕೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಟೋಲ್ ದರ ನಿಗದಿ ಮಾಡಿತ್ತು. ನಂತರ ಎರಡು ತಿಂಗಳ ಅವಧಿಯಲ್ಲೇ 2023ರ ಜೂನ್ 1 ರಿಂದ ಶೇ.22ರಷ್ಟು ದರ ಹೆಚ್ಚಿಸಲಾಗಿತ್ತು. ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ದರ ಹೆಚ್ಚಳವನ್ನು ವಾಪಸ್ ಪಡೆದಿತ್ತು. ನಂತರ ಏ.1ರಿಂದ ವಾರ್ಷಿಕ ಶೇ.5ರಷ್ಟು ಟೋಲ್ ದರ ಹೆಚ್ಚಳ ಮಾಡುವ ನಿರ್ಧಾರ ಪ್ರಕಟಿಸಿತ್ತು. ಹಾಗಾಗಿ ಇದೀಗ ಮತ್ತೆ ಟೋಲ್ ದರ ಪರಿಷ್ಕರಣೆಯಾಗಿದೆ. ಶುಲ್ಕದಲ್ಲಿ ಏರಿಕೆಯಾಗಿರುವ ವಿಷಯವನ್ನು ಪ್ರಾಧಿಕಾರದ ಮೂಲಗಳು ಖಚಿತಪಡಿಸಿವೆ.

 

Tags:
error: Content is protected !!