Mysore
27
overcast clouds

Social Media

ಭಾನುವಾರ, 22 ಮಾರ್ಚ್ 2026
Light
Dark

ಚಿತ್ರರಂಗದಲ್ಲಿ ಭರವಸೆ ಮೂಡಿಸುತ್ತಿರುವ ಕೊತ್ತೇಗಾಲದ ಯುವಕ ಮನ್ವಿತ್

ಸರಗೂರು: ತಾಲ್ಲೂಕಿನ ಕೊತ್ತೇಗಾಲ ಗ್ರಾಮ ಮೂಲದ ಯುವ ಪ್ರತಿಭೆ ಮನ್ವಿತ್, ಕೃಷಿಕ ಕುಟುಂಬದಲ್ಲಿ ಜನಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸುತ್ತಿದ್ದಾರೆ. ಮೈಸೂರಿನ ರಂಗಾಯಣದ ‘ಸಂಚಲನ’ ರಂಗತಂಡದಲ್ಲಿ ಸೇರಿ ೧೨ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ನಟನಾ ಪಾಠ ಕಲಿತಿದ್ದಾರೆ.

೨೦೨೧ರಲ್ಲಿ ‘ಆಂಗರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮನ್ವಿತ್, ನಂತರ ‘ಭಾರತದ ಪ್ರಜೆಗಳಾದ ನಾವು’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಈ ಚಿತ್ರ ಸಾಮಾಜಿಕ ಸಂದೇಶ ನೀಡಿದ ಉತ್ತಮ ಚಿತ್ರವೆಂದು ಕರ್ನಾಟಕ ಸರ್ಕಾರದಿಂದ ಪ್ರಶಂಸೆಗೆ ಪಾತ್ರವಾಗಿದೆ. ‘ಸಂಜು’ ಚಿತ್ರದಲ್ಲಿ ಲವರ್ ಬಾಯ್ ಪಾತ್ರದ ಮೂಲಕ ಯುವಜನರಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಪ್ರಸ್ತುತ ಮನ್ವಿತ್ ಅವರ ಅಭಿನಯದ ‘ಹೈವೇ ನಂಬರ್ ೨೭೫’ (ಹಾರರ್), ‘ಡೆತ್ ಸರ್ಟಿಫಿಕೇಟ್’, ‘ಬೇಬಿ ೨೦೨೫’ ಹಾಗೂ ‘ಧ್ರುವನಕ್ಷತ್ರ’ ನಾಲ್ಕು ಕನ್ನಡ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಜೊತೆಗೆ ತಮಿಳಿನ ‘ಕೊಪ್ಪಂ’ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದು, ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಹಿಂದಿ ಚಿತ್ರರಂಗದಲ್ಲಿಯೂ ನಾಯಕನಾಗಿ ನಟಿಸಲು  ಅವಕಾಶ ದೊರೆತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

ಗ್ರಾಮೀಣ ಪ್ರದೇಶದಿಂದ ಬಂದ ಚಿತ್ರನಟ ಮನ್ವಿತ್ ಅವರ ಸಾಧನೆಯನ್ನು ಕೊತ್ತೇಗಾಲ ಗ್ರಾಮದ ಜನರು ಮೆಚ್ಚಿ ಅಭಿನಂದಿಸಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಈ ಪ್ರತಿಭಾವಂತ ನಟ ಇನ್ನಷ್ಟು ಎತ್ತರಕ್ಕೆ ಏರಲಿ, ನಾಡಿನ ಹೆಮ್ಮೆ ಆಗಲಿ ಎಂಬುದು ಎಲ್ಲರ ಆಶಯವಾಗಿದೆ.

Tags:
error: Content is protected !!