Mysore
27
overcast clouds

Social Media

ಭಾನುವಾರ, 22 ಮಾರ್ಚ್ 2026
Light
Dark

ದೇಶದೊಳಗಿನ ದೇಶದ್ರೋಹಿಗಳ ವಿರುದ್ಧ ಇರಾನ್‌ ಕಠಿಣ ಕ್ರಮ

ಟೆಹರಾನ್:‌ ಇರಾನ್‌ ಮೇಲೆ ಯುದ್ಧ ಆರಂಭವಾಗಿ ಸುಮಾರು 20 ದಿನಗಳು ಕಳೆಯುತ್ತಿರುವ ಬೆನ್ನಲ್ಲೇ ಪೊಲೀಸ್‌ ಅಧಿಕಾರಿಗಳ ಕೊಲೆ ಮತ್ತು ಅಮೇರಿಕಾ ಹಾಗೂ ಇಸ್ರೇಲ್‌ ಪರವಾಗಿ ಗುಪ್ತಚರ ಕಾರ್ಯಾಚರಣೆ ನಡೆಸಿದ ಆರೋಪದ ಮೇಲೆ ಮೂವರನ್ನು ಗಲ್ಲಿಗೇರಿಸಲಾಗಿದೆ.

ಈ ವರ್ಷದ ಜನವರಿಯಲ್ಲಿ ನಡೆದಿದ್ದ ಪ್ರತಿಭಟನೆಗಳ ವೇಳೆ ಇಬ್ಬರು ಕಾನೂನು ಪಾಲನಾ ಅಧಿಕಾರಿಗಳನ್ನು ಕೊಂದ ಆರೋಪ ಇವರ ಮೇಲಿತ್ತು. ಜಿಯೋನಿಸ್ಟ್‌ ಆಡಳಿತ ಮತ್ತು ಅಮೇರಿಕಾದ ಪರವಾಗಿ ವಿಧ್ವಂಸಕ ಕೃತ್ಯ ಎಸಗಿದ ಕಾರಣಕ್ಕೆ ಅವರನ್ನು ನೇಣು ಹಾಕಲಾಗಿದೆ.

ಡಿಸೆಂಬರ್‌ ಅಂತ್ಯದಲ್ಲಿ ಆರಂಭವಾದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಇದುವರೆಗೆ 3117 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್‌ ಅಧಿಕಾರಿಗಳು ಹೇಳಿದ್ದಾರೆ.

 

Tags:
error: Content is protected !!