Mysore
26
scattered clouds

Social Media

ಶನಿವಾರ, 16 ಮೇ 2026
Light
Dark

ಹುಣಸೂರು: ರೈಲ್ವೆ ಹಳಿ ತಡೆಗೋಡೆಗೆ ಸಿಲುಕಿ ಒದ್ದಾಡಿದ ಕಾಡಾನೆ

ಹುಣಸೂರು: ರೈಲ್ವೆ ಹಳಿ ತಡೆಗೋಡೆಗೆ ಸಿಲುಕಿ ಕಾಡಾನೆಯೊಂದು ಕೆಲಕಾಲ ಒದ್ದಾಟ ನಡೆಸಿದ ಘಟನೆ ತಾಲ್ಲೂಕಿನ ಉಡುವೆಪುರ ಬಳಿ ನಡೆದಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆಯೊಂದು ರೈಲ್ವೆ ಹಳಿ ತಡೆಗೋಡೆಗೆ ಸಿಲುಕಿ ಒದ್ದಾಟ ನಡೆಸಿದೆ.

ರೈತರ ಜಮೀನಿನಲ್ಲಿ ಹೊಟ್ಟೆ ತುಂಬಾ ಮೇವು ತಿಂದಿದ್ದ ಕಾಡಾನೆಯು ರೈತರ ಕೂಗಾಟ, ಚೀರಾಟ,‌ ವಾಹನ ಶಬ್ಧಕ್ಕೆ ಹೆದರಿತು. ಕಾಡಿನಿಂದ ಹೊರ ಬಂದು ವಾಪಸ್ ಕಾಡಿಗೆ ಹೋಗೋ ವೇಳೆ ರೈಲ್ವೆ ಬ್ಯಾರಿಕೇಡ್‌ನಲ್ಲಿ ಲಾಕ್‌ ಆದ ಆನೆಯು, ತಡೆಗೋಡೆ ಅಡಿಯಿಂದ ನುಸುಳಲು ಯತ್ನಿಸಿ ಸಿಲುಕಿ ಪರದಾಡಿತು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಬ್ಯಾರಿಕೇಡ್‌ ತೆರವುಗೊಳಿಸಿ ಆನೆಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾದರು.

 

Tags:
error: Content is protected !!