Mysore
26
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ಓದುಗರ ಪತ್ರ: ಆಟೋ ಚಾಲಕರಿಂದ ಅರವಟ್ಟಿಗೆ ಸೌಲಭ್ಯ

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಬಿಸಿಲಿನ ತಾಪ ಹೆಚ್ಚಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿರುವ ಚಾಮುಂಡೇಶ್ವರಿ ಆಟೋ ಚಾಲಕರ ಸಂಘದವರು ಅರವಟ್ಟಿಗೆ ಸೌಲಭ್ಯವನ್ನು ಕಲ್ಪಿಸಿದ್ದಾರೆ.

ಇದರಿಂದ ಪಾದಚಾರಿಗಳು, ಬಸ್‌ಗಾಗಿ ಕಾಯುವವರು, ಅದರಲ್ಲೂ ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅರವಟ್ಟಿಗೆಯಿಂದ ತುಂಬಾ ಅನುಕೂಲವಾಗುತ್ತಿದೆ.

-ಪ್ರಕಾಶ್ ವಣಗೇರಿ, ಪತ್ರಿಕೋದ್ಯಮ ವಿಭಾಗ ವಿದ್ಯಾರ್ಥಿ, ಮಹಾರಾಜ ಕಾಲೇಜು ಮೈಸೂರು

Tags:
error: Content is protected !!