Mysore
30
few clouds

Social Media

ಗುರುವಾರ, 12 ಮಾರ್ಚ್ 2026
Light
Dark

ಮಲಗಿದ್ದ ವೇಳೆ ಹೃದಯಾಘಾತ: ಆರೋಗ್ಯ ಇಲಾಖೆ ನೌಕರ ಸಾವು

Young man dies of sudden heart attack at Mysore

ಹಾಸನ: ಹೃದಯಾಘಾತದಿಂದ ಆರೋಗ್ಯ ಇಲಾಖೆ ನೌಕರ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ದೇವಾನಂದ್‌ ಎಂಬುವವರೇ ಮೃತಪಟ್ಟ ದುರ್ದೈವಿ. ಕಳೆದ 15 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೇವಾನಂದ್‌ಗೆ ಇಂದು ಮುಂಜಾನೆ ಮಲಗಿದ್ದ ವೇಳೆಯೇ ಹೃದಯಾಘಾತವಾಗಿದೆ.

ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲಿ ದೇವಾನಂದ್‌ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ತಾಯಿ, ಮಡದಿ ಹಾಗೂ ಇಬ್ಬರು ಮಕ್ಕಳನ್ನು ದೇವಾನಂದ್‌ ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

 

Tags:
error: Content is protected !!