Mysore
26
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಮಹಾರಾಷ್ಟ್ರದ ನೂತನ ಡಿಸಿಎಂ ಆಗಿ ಸುನೇತ್ರಾ ಪವಾರ್‌ ಅಧಿಕಾರ ಸ್ವೀಕಾರ

ಮುಂಬೈ: ಮಹಾರಾಷ್ಟ್ರದ ನೂತನ ಡಿಸಿಎಂ ಆಗಿ ಅಜಿತ್‌ ಪವಾರ್‌ ಪತ್ನಿ ಸುನೇತ್ರಾ ಪವಾರ್‌ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಅಜಿತ್‌ ಪವಾರ್‌ ಅವರು ಜನವರಿ ತಿಂಗಳಿನಲ್ಲಿ ನಡೆದ ವಿಮಾನ ಅಪಘಾತವೊಂದರಲ್ಲಿ ನಿಧನರಾಗಿದ್ದರು.

ಇದು ಅವರ ಬೆಂಬಲಿಗರು ಹಾಗೂ ಎನ್‌ಸಿಪಿ ಪಕ್ಷಕ್ಕೆ ದೊಡ್ಡ ಆಘಾತ ನೀಡಿತ್ತು. ಪತಿಯ ನಿಧನದಿಂದ ತೆರವಾದ ಸ್ಥಾನಕ್ಕೆ ಸುನೇತ್ರಾ ಪವಾರ್‌ ಅವರನ್ನು ನೇಮಕ ಮಾಡಲಾಗಿತ್ತು.

ಸುನೇತ್ರಾ ಪವಾರ್‌ ಅವರು ಇಂದು ಮುಂಬೈನ ಮಂತ್ರಾಲಯದಲ್ಲಿ ಮಹಾರಾಷ್ಟ್ರದ ಡಿಸಿಎಂ ಆಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.

ಈ ಮೂಲಕ ಇತಿಹಾಸದಲ್ಲೇ ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸುನೇತ್ರಾ ಪವಾರ್‌ ಪಾತ್ರರಾಗಿದ್ದಾರೆ.

 

Tags:
error: Content is protected !!