Mysore
24
overcast clouds

Social Media

ಬುಧವಾರ, 27 ಮೇ 2026
Light
Dark

ಓದುಗರ ಪತ್ರ: ಮೆಟ್ರೋ ಪ್ರಯಾಣ ದರ ಏರಿಕೆ ಸಲ್ಲದು

ಓದುಗರ ಪತ್ರ

ಬೆಂಗಳೂರಿನ ಜೀವನಾಡಿಯಾಗಿರುವ ಮೆಟ್ರೋ ರೈಲು ಪ್ರಯಾಣ ದರವನ್ನು ಹತ್ತು ತಿಂಗಳ ಅಲ್ಪಾವಽಯಲ್ಲಿ ಎರಡನೇ ಬಾರಿಗೆ ಏರಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ.  ಸಾರಿಗೆ ನಿಗಮದ  ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿ ಹಾಕಲು ಸಾಮಾನ್ಯ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುವುದು ಎಷ್ಟು ಸರಿ?  ಈಗಾಗಲೇ ಇಂಧನ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ವರ್ಗದ ಜನರಿಗೆ  ಮೆಟ್ರೋ ಪ್ರಯಾಣ ದರ  ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಿದೆ. ಸಾರ್ವಜನಿಕ ಸಾರಿಗೆಯು ಲಾಭದಾಯಕ ಉದ್ದಿಮೆಯಾಗುವ ಮೊದಲು ಜನಸ್ನೇಹಿಯಾಗಬೇಕಿದೆ. ಸರ್ಕಾರವು ಕೂಡಲೇ ಈ ಪ್ರಸ್ತಾವನೆಯನ್ನು ಹಿಂಪಡೆದು ಜನಸಾಮಾನ್ಯರ ಹಿತ ಕಾಯಬೇಕು.

-ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!