Mysore
21
few clouds

Social Media

ಶನಿವಾರ, 07 ಫೆಬ್ರವರಿ 2026
Light
Dark

ಮೈಸೂರು | ರೈಲು ಸೇವೆಗಳ ನಿಯಂತ್ರಣ, ಮರುನಿಗದಿ

ಮೈಸೂರು : ದೇವರಗುಡ್ಡ ಮತ್ತು ಬ್ಯಾಡಗಿ ನಡುವಿನ ಎಲ್ಸಿ ಸಂಖ್ಯೆ 222 ರಲ್ಲಿ ತಾತ್ಕಾಲಿಕ ಗರ್ಡರ್‌ಗಳನ್ನು ಸೇರಿಸಲು ಮತ್ತು ತೆಗೆದುಹಾಕಲು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವುದರಿಂದ ಅಗತ್ಯಕ್ಕೆ ತಕ್ಕಂತೆ ಕೆಲವೊಂದು ರೈಲು ಸೇವೆಗಳನ್ನು ರದ್ದುಗೊಳಿಸಲಾಗುವುದು, ಭಾಗಶಃ ರದ್ದುಗೊಳಿಸಲಾಗುವುದು, ಮಾರ್ಗ ಬದಲಾವಣೆ ಮಾಡಲಾಗುವುದು, ನಿಯಂತ್ರಿಸಲಾಗುವುದು ಮತ್ತು ಮರು ನಿಗದಿಪಡಿಸಲಾಗುವುದು ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ಹಣಕಾಸು ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಬಕಾರಿ ಪೃಥ್ವಿ ಎಸ್ ಹುಲ್ಲತ್ತಿ ಅವರು ತಿಳಿಸಿದ್ದಾರೆ.

ಮರುನಿಗದಿ : ಬೆಳಗಾವಿ- ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17325) ಫೆ. 17 ರಂದು ಬೆಳಗಾವಿಯಿಂದ ಹೊರಡುವಾಗ 120 ನಿಮಿಷಗಳ ಕಾಲ ಮರುನಿಗದಿಗೊಳ್ಳಲಿದೆ ಹಾಗೂ ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ಮರುನಿಗದಿಗೊಳ್ಳಲಿದೆ.

ನಿಯಂತ್ರಣ: ಮೈಸೂರು-ಪಂಡರಾಪುರ ಎಕ್ಸ್‌ಪ್ರೆಸ್ ಅನ್ನು (ರೈಲು ಸಂಖ್ಯೆ 16535 ) ಫೆ. 10 ರಂದು ಮಾರ್ಗ ಮಧ್ಯೆ 50 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ಹಾಗೆಯೇ ತಿರುನೇಲ್ವೇಲಿ ಜಂಕ್ಷನ್-ದಾದರ್ ಎಕ್ಸ್‌ಪ್ರೆಸ್ ಅನ್ನು (ರೈಲು ಸಂಖ್ಯೆ 11022 ) ಫೆ.16ರಂದು ಮಾರ್ಗ ಮಧ್ಯೆ 110 ನಿಮಿಷಗಳ ಕಾಲ ಮಾರ್ಗ ಮಧ್ಯೆ ನಿಯಂತ್ರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

 

 

Tags:
error: Content is protected !!