Mysore
18
few clouds

Social Media

ಶನಿವಾರ, 07 ಫೆಬ್ರವರಿ 2026
Light
Dark

ಅರಣ್ಯ ಅಧಿಕಾರಿಗಳಿಂದಲೇ ಮೈಸೂರಿನಲ್ಲಿ ʻಮರಗಳ ಮಾರಣಹೋಮ’

ಮೈಸೂರು : ನಗರದ ಎನ್‌ಐಇ ಕಾಲೇಜು ಹಿಂಭಾಗದ ಅರಣ್ಯ ಇಲಾಖೆಯ ಶ್ರೀಗಂಧದ ಕೋಠಿ ಆವರಣದಲ್ಲಿ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಕ್ಕಾಗಿ ಹತ್ತಾರು ಮರಗಳನ್ನು ಅನುಮತಿಯಿಲ್ಲದೇ ಅರಣ್ಯ ಇಲಾಖೆಯ ಅಧಿಕಾರಿಗಳೇ ಮರಗಳ ಮಾರಣ ಹೋಮ ನಡೆಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಗೊಳ್ಳುವಂತೆ ಅರಣ್ಯಸಚಿವ ಈಶ್ವರ್ ಬಿ.ಖಂಡ್ರೆ ಅವರಿಗೆ ಪರಿಸರ ಹೋರಾಟಗಾರ್ತಿ ಭಾನುಮೋಹನ್ ದೂರು ಸಲ್ಲಿಸಿದ್ದಾರೆ.

ಅರಣ್ಯ ಅಧಿಕಾರಿಗಳೇ ಅರಣ್ಯ ನಾಶಕ್ಕೆ ಕೈಹಾಕಿದ್ದಾರೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇಂತಹ ಕೆಲವು ಅಧಿಕಾರಿಗಳ ಅಮಾನವೀಯ ನಡೆಯಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಅಲ್ಲದೇ ಯಾವುದೇ ಅನುಮತಿಯಿಲ್ಲದೇ ಮರಗಳನ್ನು ಕತ್ತರಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸ್ಥಳದಲ್ಲಿ ಹಳೆಯ ಕ್ವಾರ್ಟರ್ಸ್ ಇದ್ದು, ಅದನ್ನು ದುರಸ್ತಿ ಮಾಡಿಸದೇ, ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಹತ್ತಾರು ಮರಗಳನ್ನು ಕತ್ತರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಅಧಿಕಾರಿಗಳಿಗೆ ಸ್ವಲ್ಪವೂ ಪರಿಸರದ ಕಾಳಜಿಯಿಲ್ಲ, ಜವಾಬ್ದಾರಿಯಿಲ್ಲದಂತಾಗಿದೆ. ಸುಂದರವಾದ ಪ್ರಕೃತಿಯನ್ನು ನಾಶ ಮಾಡಿ, ಇಂಥಹ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಅವಶ್ಯಕವಿತ್ತೇ? ಕಟ್ಟಡದ ಅವಶ್ಯಕತೆಯಿದ್ದಲ್ಲಿ ಬೇರೆಡೆ ನಿರ್ಮಾಣ ಮಾಡಬೇಕಿತ್ತು. ಅದರ ಬದಲಾಗಿ ಮರಗಳನ್ನು ನಾಶ ಮಾಡಲಾಗಿದ್ದು, ಕೂಡಲೇ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tags:
error: Content is protected !!