Mysore
25
light rain

Social Media

ಸೋಮವಾರ, 04 ಮೇ 2026
Light
Dark

ಬೌದ್ಧ ಧರ್ಮಗುರು ದಲೈಲಾಮಾಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಗೌರವ

ಟಿಬೆಟ್‌ ಬೌದ್ಧ ಧರ್ಮಗುರು ಮತ್ತು ಜಾಗತಿಕ ಶಾಂತಿದೂತ ಎಂದು ಪ್ರಖ್ಯಾತರಾದ ದಲೈಲಾಮಾ ಅವರು ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ತಮ್ಮ 90ನೇ ವಯಸ್ಸಿನಲ್ಲಿ ಬೆಸ್ಟ್‌ ಆಡಿಯೋ ಬುಕ್‌, ನರೇಷನ್‌ ಅಂಡ್‌ ಸ್ಟೋರಿಟೆಲ್ಲಿಂಗ್‌ ರೆಕಾರ್ಡಿಂಗ್‌ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಪಡೆಯುವ ಮೂಲಕ ಅವರು ಹೊಸ ದಾಖಲೆ ಬರೆದಿದ್ದಾರೆ. ಜಾಲತಾಣಗಳ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರಶಸ್ತಿಯು ದಲೈಲಾಮಾ ಅವರ ಶಾಂತಿ, ಕರುಣೆ ಮತ್ತು ಮಾನವೀಯತೆಯ ಸಂದೇಶಗಳಿಗೆ ಸಂದ ಜಾಗತಿಕ ಗೌರವವಾಗಿದೆ.

ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ದಿ ರೆಕಾರ್ಡಿಂಗ್‌ ಅಕಾಡೆಮಿ ಆಯೋಜಿಸಿದ್ದ 68ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಈ ಗೌರವವನ್ನು ಘೋಷಣೆ ಮಾಡಲಾಯಿತು. ಈ ಪ್ರಶಸ್ತಿಯು ಕೇವಲ ಸಂಗೀತಕ್ಕೆ ಮಾತ್ರ ಸೀಮಿತವಾಗದೇ ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಪ್ರಜ್ಞೆಗೆ ಸಂದ ಅಂತರಾಷ್ಟ್ರೀಯ ಗೌರವವೆಂದು ಪರಿಗಣಿಸಲಾಗಿದೆ.

 

Tags:
error: Content is protected !!