Mysore
29
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

ಓದುಗರ ಪತ್ರ: ರಾಮಕೃಷ್ಣನಗರಕ್ಕೆ ಮತ್ತಷ್ಟು ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ರಾಮಕೃಷ್ಣನಗರ ಮಾರ್ಗಕ್ಕೆ ಪ್ರತಿದಿನ ನಗರ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ಆದರೆ ಈ ಮಾರ್ಗದಲ್ಲಿ ಓಡಾಡುವ ಬಸ್ಸುಗಳ ಸಂಖ್ಯೆ ಮಾತ್ರ ಕಡಿಮೆ, ರಾಮಕೃಷ್ಣನಗರಕ್ಕೆ ನಗರ ಸಾರಿಗೆಯ ೬೧,೬೨,೧೩೫ ಸಂಖ್ಯೆಯ ಬಸ್ಸುಗಳು ಸಂಚರಿಸುತ್ತವೆ. ಆದರೆ ೧೩೫ ಸಂಖ್ಯೆಯ ಬಸ್ ಈ ಮಾರ್ಗದಲ್ಲಿ ಸಂಚರಿಸುವುದನ್ನು ನಿಲ್ಲಿಸಲಾಗಿದೆ.

ಮೈಸೂರಿನ ರಾಮಕೃಷ್ಣನಗರ ಅಭಿವೃದ್ಧಿ ಹೊಂದಿದ ಬಡಾವಣೆಯಾಗಿದೆ. ಇಂತಹ ಬಡಾವಣೆಗಳಲ್ಲಿ ದಿನನಿತ್ಯ ಬೆಳಿಗ್ಗೆ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ವಿವಿಧ ಕೆಲಸಗಳಿಗೆ ಹೋಗುವ ಸಾರ್ವಜನಿಕರು ಬಸ್ಸು ಲಭ್ಯವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ರಾಮಕೃಷ್ಣ ನಗರದಿಂದ ರೈಲ್ವೆ ನಿಲ್ದಾಣ ಮಾರ್ಗವಾಗಿ ಹಾದು ಹೋಗುವ ನಗರ ಸಾರಿಗೆ ಬಸ್ಸುಗಳು ಕೂಡ ತೀರ ವಿರಳವಾಗಿವೆ. ಆದ್ದರಿಂದ ಸಂಬಂಧಪಟ್ಟವರು ರಾಮಕೃಷ್ಣ ನಗರಕ್ಕೆ ಹೆಚ್ಚುವರಿ ಬಸ್ ಸೌಲಭ್ಯವನ್ನು ಕಲ್ಪಿಸಬೇಕೆಂದು ಮನವಿ.

–ಬಿ.ಎಸ್.ಸಾಯಿ ಸಂದೇಶ್,ಮೈಸೂರು

 

Tags:
error: Content is protected !!