Mysore
30
scattered clouds

Social Media

ಶನಿವಾರ, 21 ಮಾರ್ಚ್ 2026
Light
Dark

ಹೆಣ್ಣು ಮಗು ಮಾರಾಟ ; ಐವರ ಬಂಧನ

ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ.

ಮಗುವಿನ ತಂದೆ, ತಾಯಿಯಾದ ಮಂಜುನಾಯಕ, ಸಿಂಧು, ಮಧ್ಯವರ್ತಿ ಶಾಂತಾ, ಅಕ್ರಮವಾಗಿ ಮಗುವನ್ನು ಪಡೆದುಕೊಂಡಿದ್ದ ಜವರಯ್ಯ ಹಾಗೂ ನೇತ್ರಾ ಬಂಧಿತರು.

ಚಾ.ನಗರದ ರಾಮಸಮುದ್ರದಲ್ಲಿ ವಾಸವಿರುವ ಸಿಂಧು ಹಾಗೂ ಮಂಜುನಾಯಕ ದಂಪತಿಗೆ ಕಳೆದ ಜುಲೈ 26ರಂದು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಬಳಿಕ ದಂಪತಿಯ ಬಳಿ ಮಗು ಇಲ್ಲದಿರುವ ಬಗ್ಗೆ ಸಲ್ಲಿಕೆಯಾದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೋಷಕರನ್ನು ವಿಚಾರಣೆಗೊಳಪಡಿಸಿದಾಗ ಮಾರಾಟ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಮಗು ಆರೋಗ್ಯಯುತವಾಗಿದ್ದು ಶಿಶು ಅಭಿವೃದ್ಧಿ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ. ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚುವರಿ ಎಸ್‌ಪಿ ಎಂ.ಎನ್‌.ಶಶಿಧರ್, ಡಿವೈಎಸ್‌ಪಿ ಸ್ನೇಹಾರಾಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ ಎಂ.ಜಗದೀಶ್‌, ಪಿಎಸ್ಐ ಆರ್‌.ಮಂಜುನಾಥ್‌ ಅವರನ್ನೊಳಗೊಂಡ ತಂಡದವರು ಭಾಗವಹಿಸಿದ್ದರು.

 

Tags:
error: Content is protected !!