ದ್ವಿಚಕ್ರ ವಾಹನಗಳಿಗೆ ಸಂಚಾರ ನಿಯಮದಂತೆ ಎರಡೂ ಕಡೆ ದರ್ಪಣವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಯಾರು ಈ ನಿಯಮವನ್ನು ಉಲ್ಲಂಘಿಸುತ್ತಾರೋ ಅವರಿಗೆ ಸಂಚಾರ ನಿಯಮದ ಕಾನೂನು ಅಡಿಯಲ್ಲಿ ಶಿಕ್ಷೆ ಪ್ರಮಾಣವನ್ನು ಉಲ್ಲೇಖಿಸಿದ್ದರೂ ಇದೆಲ್ಲವನ್ನೂ ಮರೆತು ದ್ವಿಚಕ್ರ ವಾಹನ ಸವಾರರು ತಮ್ಮ ಬೈಕ್‌ಗಳು ಆಕರ್ಷಿತವಾಗಿ ಕಾಣಬೇಕೆಂದು ದರ್ಪಣವನ್ನು ಎರಡೂ ಕಡೆಯಲ್ಲೂ ತೆಗೆದುಹಾಕಿ ವಾಹನವನ್ನು ಚಾಲನೆ ಮಾಡುವುದಲ್ಲದೆ, ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಸವಾರರಿಗೂ ತೊಂದರೆ ಕೊಡುತ್ತಾರೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿವೆ.
ತಮ್ಮ ದ್ವಿಚಕ್ರ ವಾಹನಗಳ ದರ್ಪಣ ತೆಗೆದರೆ, ಅದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂಬ ಅರಿವಿದ್ದರೂ ಇಂತಹ ತಪ್ಪುಗಳನ್ನು ಮಾಡಿ ಮತ್ತೊಬ್ಬರ ಪ್ರಾಣ ಹಾನಿಗೆ ಕಾರಣರಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬ ದ್ವಿಚಕ್ರ ವಾಹನ ಚಾಲಕರೂ ಕಡ್ಡಾಯವಾಗಿ ವಾಹನಗಳಿಗೆ ಎಡಭಾಗ ಮತ್ತು ಬಲಭಾಗದಲ್ಲಿ ದರ್ಪಣ ಅಳವಡಿಕೆ ಮಾಡುವುದನ್ನು ಕಡ್ಡಾಯಗೊಳಿಸಲು ಪೊಲೀಸ್ ಇಲಾಖೆಯವರು ಕ್ರಮ ಕೈಗೊಳ್ಳಬೇಕಾಗಿದೆ.
– ಬಿ.ಎಸ್.ಸಾಯಿ ಸಂದೇಶ್, ಮೈಸೂರು





