Mysore
27
broken clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಪಟ್ಟಣದ ಬಿಜಿಎಸ್ ಭವನದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕನ್ನಡ ಭಾಷಾ ಶಿಕ್ಷಕರ ಭಾಷಾ ಬಲವರ್ಧನೆಗಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕು ಕಳೆದ ಬಾರಿಗಿಂತ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಽಕಾರಿ ರಾಜು ಅವರ ನೇತೃತ್ವದಲ್ಲಿ ಹೊಸ ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.

೩ ತಿಂಗಳುಗಳಿಂದ ‘ನಾನು ಓದುತ್ತೇನೆ’, ಕನ್ನಡ ಪ್ರಯೋಗಾಲಯ, ಕಲಿಕಾ ಖಾತ್ರಿ ಶಾಲೆಗಳಲ್ಲಿ ವಾಸ್ತವ್ಯ, ಕನ್ನಡ ಹಬ್ಬ, ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ೩ ತಿಂಗಳು ಕಷ್ಟಪಟ್ಟು ಪ್ರಾಮಾಣಿಕವಾಗಿ ಮಕ್ಕಳಿಗೆ ಶಿಕ್ಷಣ ನೀಡಿದರೆ ಉತ್ತಮ ಫಲಿತಾಂಶ ಬರಲಿದೆ ಎಂದರು.

ಶಿಕ್ಷಕರಲ್ಲಿ ಇರುವ ಕೌಶಲವನ್ನು ಹೊರಗೆ ತರುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಸಿದರು.

ಇದನ್ನು ಓದಿ: ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ 

ಇದೇ ವೇಗದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದರೆ ರಾಜ್ಯದಲ್ಲಿ ಮಾದರಿ ತಾಲ್ಲೂಕಾಗಿ ಬದಲಾಗುವುದರಲ್ಲಿ ಸಂದೇಹವಿಲ್ಲ ಎಂದರು.

೧,೨೦೦ ಮಕ್ಕಳನ್ನು ನೇರವಾಗಿ ಭೇಟಿ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಅದೇ ರೀತಿ ಮುಖ್ಯ ಶಿಕ್ಷಕರು ಕೂಡ ಉತ್ತಮ ಫಲಿತಾಂಶ ಬರುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಬಿಇಒ ಸೇರಿದಂತೆ ಶಿಕ್ಷಕರು ವಿವಿಧ ಸಾಂಸ್ಕ ತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಡಿಡಿಪಿಐ ಎಚ್.ಸಿ.ನರಸಿಂಹಮೂರ್ತಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕೃಷ್ಣಯ್ಯ, ನಂಜಯ್ಯ, ಮಹಾದೇವು, ಲಿಂಗರಾಜು, ಸಿದ್ದರಾಜು, ನಾಗರಾಜು, ಪ್ರಕಾಶ್, ರೂಪ, ವಸಂತ್ ಕುಮಾರ್, ಕೆಂಪರಾಜು, ನಾಗೇಂದ್ರ, ಅಣ್ಣೂರು ಮಹಾದೇವ, ಚಂದ್ರಶೇಖರ್, ಜ್ಯೋತಿ, ದೊರೆರಾಜು, ಗಿರೀಶ್ ಮೂರ್ತಿ, ದೊರೆಸ್ವಾಮಿ, ಸೋಮಸುಂದರ್, ಪುಟ್ಟರಾಜು, ರವೀಂದ್ರ, ಚಿನ್ನಸ್ವಾಮಿ, ಶಿವಪ್ರಕಾಶ್, ಶಿವಯ್ಯ, ಕೃಷ್ಣಮೂರ್ತಿ, ಚಿಕ್ಕದೇವು, ಸುನಂದಾ, ಕಬಿನಿ ಹೇಮಂತ, ಸಿದ್ದರಾಮ, ವನಸಿರಿ ಉಮೇಶ, ರವಿ, ಮಹೇಶ್, ಲಿಂಗರಾಜು, ಪ್ರಕಾಶ್, ಕೆಂಪರಾಜು, ನಾಗೇಂದ್ರ, ಚಂದ್ರಶೇಖರ್, ಗೌರಿ, ನಾರಾಯಣ ಸ್ವಾಮಿ, ಕಂದೇಗಾಲ ಶಿವರಾಜ್, ವಸಂತ್ ಕುಮಾರ್, ಚಂದ್ರಶೇಖರ್, ಪುಟ್ಟರಾಜು, ಪ್ರತಿಭಾ, ರವೀಂದ್ರ, ಕೃಷ್ಣಮೂರ್ತಿ, ಚಿಕ್ಕದೇವು, ಮಹೇಶ್, ನಾಗೇಂದ್ರ, ನಾಗರಾಜು, ಮಂಜುನಾಥ್, ವೆಂಕಟರಂಗ, ಚೆನ್ನಾಯಕ, ಪ್ರಮೋದ್, ರೂಪ, ಬಬಿತಾ, ಕುಮಾರ, ೧,೨೦೦ ಶಿಕ್ಷಕರು ಹಾಜರಿದ್ದರು.

Tags:
error: Content is protected !!