ಗುಂಡ್ಲುಪೇಟೆ : ತಾಲ್ಲೂಕಿನ ಬಂಡೀಪುರ ಅರಣ್ಯ ಇಲಾಖೆಯ ಮರಳಳ್ಳ ಕ್ಯಾಂಪ್ ಬಳಿ ಕರ್ತವ್ಯ ನಿರ್ವಹಿಸುತಿದ್ದ ಸಣ್ಣಹೈದ( ೫೫) ಹುಲಿ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ.
ಅನೇಕ ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಎಂ,ಆರ್ ನೌಕರನಾಗಿ ಕೆಲಸ ನಿರ್ವಹಿಸುತಿದ್ದ ಎನ್ನಲಾಗಿದೆ.
ಬೆಳಿಗ್ಗೆ ಕ್ಯಾಂಪ್ ನಲ್ಲಿ ತಿಂಡಿ ತಿಂದು ಹೊರ ಬಂದಿದ್ದಾರೆ ಕ್ಯಾಂಪ್ ನಿಂದ ೫೦೦ ಮೀಟರ್ ಅಂತರದಲ್ಲಿ ಸಾವನ್ನಪ್ಪಿದ್ದಾರೆ. ಬಂಡೀಪುರ ಮರಳಹಳ್ಳ ಕ್ಯಾಂಪ್ ಬಳಿ ಗಸ್ತು ತಿರುಗುತ್ತಿದ್ದ ವೇಳೆ ವಾಚರ್ ಮೇಲೆ ಹುಲಿ ದಾಳಿ ನಡೆಸಿದೆ ಎನ್ನಲಾಗಿದೆ.
ಇದನ್ನು ಓದಿ:ಲೋಕ್ ಅದಾಲತ್‌ನಲ್ಲಿ 14,850 ಪ್ರಕರಣ ಇತ್ಯರ್ಥ : ಒಂದಾದ ಕೌಟುಂಬಿಕ ಕಲಹದಿಂದ ಬೇರ್ಪಟ್ಟಿದ್ದ 6 ದಂಪತಿಗಳು
ಮೃತ ಸಣ್ಣಹೈದ ಹುಣಸೂರು ಮೂಲದ ನೇರಳೆಕುಪ್ಪಿ ಎಂಬ ಗ್ರಾಮದವರಾಗಿದ್ದು ಮೃತನಿಗೆ ಪತ್ನಿ ಹಾಗೂ ಐವರು ಮಕ್ಕಳಿದ್ದು ಒಬ್ಬ ಪುತ್ರ ಅರಣ್ಯ ಇಲಾಖೆಯಲ್ಲಿಯೇ ಕರ್ತವ್ಯ ನಿರ್ವಹಿಸುತಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆಯಿಂದ ಮೃತ ನೌಕರನ ಕುಟುಂಬಕ್ಕೆ ೪೫ ಲಕ್ಷ ಪರಿಹಾರ ನೀಡುವುದಾಗಿ ಬಂಡೀಪುರ ವಲಯಾಧಿಕಾರಿ ಮಹದೇವ್ ತಿಳಿಸಿದರು.





