Mysore
26
haze

Social Media

ಗುರುವಾರ, 01 ಜನವರಿ 2026
Light
Dark

ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ತಿರುಗೇಟು

ಬೆಂಗಳೂರು: ಇಲ್ಲಿನ ಯಲಹಂಕ, ಫಕೀರ್‌ ಕಾಲೋನಿ ಹಾಗೂ ವಸೀಮ್‌ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳ ತೆರವು ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಬುಲ್ಡೋಜರ್‌ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಇದನ್ನು ಓದಿ: ಉತ್ತರ ಪ್ರದೇಶದಂತೆ ಬುಲ್ಡೋಜರ್‌ ಬಳಸಿ ಮುಸ್ಲಿಮರ ಮನೆ ಧ್ವಂಸ: ಕರ್ನಾಟಕದ ವಿರುದ್ಧ ಪಿಣರಾಯಿ ವಿಜಯನ್‌ ಆಕ್ರೋಶ

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇರಳ ಸಿಎಂ ವಾಸ್ತವ ಅರ್ಥ ಮಾಡಿಕೊಳ್ಳದೇ ಮಾತನಾಡಿದ್ದಾರೆ. ಕೆಲವರು ಟಂಪ್‌ ಸೈಟ್‌ನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು. ಅಧಿಕಾರಿಗಳು ಅದನ್ನು ತೆರವು ಮಾಡಿದ್ದಾರೆ. ಮನೆ ಕಳೆದುಕೊಂಡವರಿಗೆ ನಾವು ಮನೆ ಹಂಚಿಕೆ ಮಾಡುತ್ತೇವೆ. ರಾಜೀವ್‌ ಗಾಂಧಿ ವಸತಿ ನಿಗಮ ಮೂಲಕ ಮನೆ ಹಂಚುತ್ತೇವೆ. ನಾವು ಬುಲ್ಡೋಜರ್‌ ಪದ್ದತಿ ಬಳಸಿಲ್ಲ. ಈ ಕುರಿತು ನಮ್ಮ ಪಕ್ಷದ ನಾಯಕರಿಗೂ ಮಾಹಿತಿ ನೀಡಿದ್ದೇವೆ. ಅವರು ಇಲ್ಲಿನ ಸ್ಥಿತಿ ತಿಳಿದುಕೊಳ್ಳದೇ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಸರ್ಕಾರಿ ಜಾಗ ಒತ್ತುವರಿಗೆ ನಾನು ಬಿಡಲ್ಲ. ಚುನಾವಣೆ ವೇಳೆ ಪಿಣರಾಯಿ ವಿಜಯನ್‌ ರಾಜಕೀಯ ಗಿಮಿಕ್‌ ಮಾಡುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ಸ್ಲಮ್‌  ಮಾಡುವುದಕ್ಕೆ ಬಿಡಲ್ಲ ಎಂದು ಹೇಳಿದರು.

Tags:
error: Content is protected !!