Mysore
17
few clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ವಾರ್‌: ಕಿಚ್ಚ ಸುದೀಪ್‌ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ವಾರ್‌ ಬಗ್ಗೆ ನಟ ಕಿಚ್ಚ ಸುದೀಪ್‌ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಯುದ್ಧಕ್ಕೆ ಸಿದ್ಧ ಮಾತಿಗೆ ಬದ್ಧ. ಹೊರಗೆ ಒಂದು ಪಡೆ ಯುದ್ಧಕ್ಕೆ ಸಜ್ಜಾಗುತ್ತಿದೆ ಎಂದು ಹುಬ್ಬಳ್ಲೀಯಲ್ಲಿ ಮಾರ್ಕ್‌ ಸಿನಿಮಾ ಪ್ರಿ ರಿಲೀಸ್‌ ಇವೆಂಟ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸುದೀಪ್‌ ತಮ್ಮ ಹೇಳಿಕೆಯ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ: ಮೈಸೂರು ಮುಡಾ ಹಗರಣ: ಇಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನಿರ್ಧಾರ

ನಾನು ಯುದ್ಧಕ್ಕೆ ಸಿದ್ಧ ಎಂದಿದ್ದು ಚಿತ್ರನಟ ದರ್ಶನ್‌ ಅವರಿಗಲ್ಲ. ದರ್ಶನ್‌ ಜೈಲಿಗೆ ಹೋಗುವ ವೇಳೆಯಲ್ಲಿ ಸುಮ್ಮನಿದ್ದೆ ನಾನು , ಈಗ ಯಾಕೆ ಅವರ ವಿರುದ್ಧ ಮಾತನಾಡಲಿ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಪತ್ರಿಕಾಗೋಷ್ಠಿಗಳಿಂದ ದೂರವಿರುತ್ತಿದ್ದ ಸುದೀಪ್‌ ತಾವು ಆಡಿದ ಮಾತು ದರ್ಶನ್‌ ಅವರತ್ತ ತಿರುಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ನಾನು ಮಾತನಾಡಿದ್ದು ಪೈರಸಿ ವಿರುದ್ಧ ಎಂದು ಹೇಳಿರುವ ಕಿಚ್ಚ ಸುದೀಪ್‌ ಅವರು, ಇತರರ ಬಗ್ಗೆ ಮಾತನಾಡಬೇಕಾಗಿ ಬಂದರೆ ನಾನು ನೇರವಾಗಿಯೇ ಮಾತನಾಡುತ್ತೇನೆ. ವಿಜಯಲಕ್ಷ್ಮೀ ಅವರು ನನ್ನ ಹೆಸರನ್ನು ಪ್ರಸ್ತಾಪಿಸಿಲ್ಲ. ವೇದಿಕೆ ಹತ್ತಿದವರು, ಮೀಡಿಯಾದಲ್ಲಿ ಮಾತನಾಡಿದವರು ಸಾಕಷ್ಟು ಮಂದಿ ಇದ್ದಾರೆ. ನನ್ನ ಬಗ್ಗೆಯೇ ಮಾತನಾಡಿದ್ದಾರೆ ಎಂದುಕೊಳ್ಳುವುದು ತಪ್ಪು. ನಾನು ಇಲ್ಲಿ ಪ್ರಾರ್ಥನೆ ಮಾಡುವಾಗ ಯಾವುದೋ ದೇವಾಲಯಗಳಲ್ಲಿ ಗಂಟೆ ಹೊಡೆದರೆ ಅದಕ್ಕೆ ನಾನು ಹೇಗೆ ಜವಾಬ್ದಾರನಾಗುತ್ತೇನೆ ಎಂದು ಹೇಳಿದ್ದಾರೆ.

Tags:
error: Content is protected !!