Mysore
27
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಗಂಗವಾಡಿ ಬಳಿ ಚಿರತೆ ದಾಳಿ : ಮೂರು ಕರು ಸಾವು

ಚಾಮರಾಜನಗರ : ತಾಲ್ಲೂಕಿನ ಗಂಗವಾಡಿ ಗ್ರಾಮದ ಬಳಿ ಶನಿವಾರ ರಾತ್ರಿ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಕರುಗಳ ಮೇಲೆ ಚಿರತೆ ದಾಳಿ ನಡೆಸಿದ್ದು, 3 ಕರುಗಳು ಮೃತಪಟ್ಟಿವೆ.

ಗ್ರಾಮದ ರಾಮಯ್ಯ ಎಂಬುವರು ಕರುಗಳು ಮೃತಪಟ್ಟಿವೆ. ಇವರು ತಮ್ಮ ಮನೆಯ ಹಿಂಭಾಗದ ಜಮೀನಿನ ಕೊಟ್ಟಿಗೆಯಲ್ಲಿ ಪ್ರತಿದಿನ 5 ಹಸುಗಳು ಹಾಗೂ 4 ಕರುಗಳ ಸೇರಿದಂತೆ 9 ರಾಸುಗಳನ್ನು ಕಟ್ಟಿ ಹಾಕುತ್ತಿದೆ.
ಶನಿವಾರ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ 4 ಕರುಗಳ ಮೇಲೆ ಚಿರತೆ ದಾಳಿ ನಡೆಸಿದ್ದು, 3 ಕರುಗಳು ಮೃತಪಟ್ಟಿವೆ. 1 ಕರುವಿಗೆ ಗಾಯವಾಗಿದೆ. ಭಾನುವಾರ ಮುಂಜಾನೆ ಹಾಲು ಕರೆಯಲು ಕೊಟ್ಟಿಗೆಗೆ ಬಂದಾಗ ಕರುಗಳು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದ ಬಳಿ 2 ತಿಂಗಳ ಹಿಂದೆ 2 ಹಸು ಹಾಗೂ ಕುರಿ ಮರಿಗಳ ಮೇಲೆ ಚಿರತೆ ದಾಳಿ ನಡೆಸಿದ್ದರಿಂದ ಮೃತಪಟ್ಟಿದವು. ಅರಣ್ಯ ಇಲಾಖೆ ವತಿಯಿಂದ ಇಲ್ಲಿಯ ವರೆಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು.

ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಂತೆ ಅರಣ್ಯ ಅಽಕಾರಿಗಳು ಗ್ರಾಮದಲ್ಲಿ ಚಿರತೆ ಬೋನು ಇರಿಸಿ ಚಿರತೆ ಸೆರೆ ಹಿಡಿಯುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿ, ಕರುಗಳು ಮೃತಪಟ್ಟಿರುವ ಸ್ಥಳದಲ್ಲೇ ಡ್ರೋನ್ ಕ್ಯಾಮೆರಾ ಬಳಸಿದರೂ ದಾಳಿ ಮಾಡಿದ ಪ್ರಾಣಿಯು ಪತ್ತೆಯಾಗಲಿಲ್ಲ.

ಈ ಸಂದರ್ಭದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಚಿರತೆ ದಾಳಿಯಿಂದ ಮೃತಪಟ್ಟಿರುವ ಕರುಗಳಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಮಾಲೀಕರಿಂದ ದಾಖಲಾತಿ ಪಡೆದುಕೊಂಡು ಚೆಕ್ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕರುಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮಾಲೀಕರಿಂದ ದಾಖಲಾತಿ ಪಡೆದುಕೊಂಡು ಆನ್‌ಲೈನ್ ಮೂಲಕ ಮಾಲೀಕರ ಖಾತೆ ನೇರವಾಗಿ ಪರಿಹಾರ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕರಾದ ಶ್ರೀಪತಿ, ಎಸಿಎಫ್ ಪ್ರಕಾಶ್‌ಅಕ್ಷಯ್, ಆರ್‌ಎಫ್‌ಒ ಸತೀಶ್, ಡಿಆರ್‌ಎಫ್‌ಒಗಳಾದ ಲಕ್ಷ ಣ್, ಮಧು, ಗ್ರಾ.ಪಂ.ಅಧ್ಯಕ್ಷ ವಸಂತಕುಮಾರ್, ಆರಾಧನ ಸಮಿತಿ ಸದಸ್ಯ ಮಸಣಾಪುರ ಶಿವನಂಜಯ್ಯ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಲ್ಕೆರೆ ಅಗ್ರಹಾರ ರೇವಣ್ಣ ಹಾಜರಿದ್ದರು.

Tags:
error: Content is protected !!