Mysore
24
few clouds

Social Media

ಶನಿವಾರ, 11 ಏಪ್ರಿಲ 2026
Light
Dark

ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌

ರಾಮನಗರ: ರಾಮನಗರದಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌ ಎಸಗಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವಿಕಾಸ್‌, ಪ್ರಶಾಂತ್‌, ಚೇತನ್‌ ಎಂದು ಗುರುತಿಸಲಾಗಿದ್ದು, ಮಾಗಡಿ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ಮೈಸೂರಲ್ಲಿ 24 ಗಂಟೆ ಅವಧಿಯಲ್ಲಿ ರೇಪ್‌ ಅಂಡ್‌ 2 ಮರ್ಡರ್‌ ; ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಹೇಳಿದ್ದೇನು.?

ಬೆಂಗಳೂರಿನ ಕಾಲೇಜೊಂದರಲ್ಲಿ 19 ವರ್ಷದ ಯುವತಿ ಓದುತ್ತಿದ್ದಳು. ವಿಕಾಸ್‌ ಎಂಬಾತ ಯುವತಿಯನ್ನು ಪರಿಚಯ ಮಾಡಿಕೊಂಡು ಆಕೆಯ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದ. ಅದನ್ನು ವಿಡಿಯೋ ಮಾಡಿಕೊಂಡ ವಿಕಾಸ್‌ ನಾನು ಕರೆದಾಗಲೆಲ್ಲಾ ಬರಬೇಕು. ಇಲ್ಲವಾದಲ್ಲಿ ವಿಡಿಯೋ ವೈರಲ್‌ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದನು. ಈ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ ವಿಕಾಸ್‌ ಸ್ನೇಹಿತರಾದ ಪ್ರಶಾಂತ್‌, ಚೇತನ್‌ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಮಾಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Tags:
error: Content is protected !!