Mysore
25
overcast clouds

Social Media

ಶುಕ್ರವಾರ, 10 ಏಪ್ರಿಲ 2026
Light
Dark

ಹುಲಿ ದಾಳಿಗೆ ಹಸು ಬಲಿ

ಹುಣಸೂರು : ತಾಲ್ಲೂಕಿನ ಗುರುಪುರ ಹುಣಸೇಕಟ್ಟೆ ಬಳಿಯ ಟಿಬೆಟ್ ಕ್ಯಾಂಪ್‌ನ ಬಿ.ವಿಲೇಜ್‌ನ ಜಮೀನಿನಲ್ಲಿ ಹುಲಿಯೊಂದು ಹಸುವನ್ನು ಕೊಂದು ಹಾಕಿದೆ.

ಟಿಬೆಟ್ ಕ್ಯಾಂಪ್ ಬಿ.ವಿಲೇಜ್‌ನ ಪೆರಿಡಾನ್ ಎಂಬವರಿಗೆ ಸೇರಿದ ಸುಮಾರು ಒಂದು ಲಕ್ಷ ರೂ. ಬೆಲೆ ಬಾಳುವ ಜರ್ಸಿ ಹಸು ಹುಲಿ ದಾಳಿಗೆ ಬಲಿಯಾಗಿದ್ದು, ಮೇಯಲು ಬಿಟ್ಟಿದ್ದ ವೇಳೆ ಈ ಘಟನೆ ನಡೆದಿದೆ. ದಾಳಿ ವೇಳೆ ಟಿಬೆಟಿಯನ್ನರ ಕೂಗಾಟ ಕೇಳಿ ಹುಲಿ ಹಸುವಿನ ಮೃತದೇಹವನ್ನು ಬಿಟ್ಟು ಕಾಲ್ಕಿತ್ತಿದೆ. ಸ್ಥಳಕ್ಕೆ ವೀರನಹೊಸಳ್ಳಿ ವನ್ಯಜೀವಿ ವಲಯದ ಆರ್‌ಎಫ್‌ಒ ವಿನೋದ್‌ಗೌಡ, ಡಿಆರ್‌ಎಫ್‌ಒ ಸಹನಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿದರು.

ವರ್ಷದ ಹಿಂದಷ್ಟೇ ಹುಣಸೇಕಟ್ಟೆ ಹಳ್ಳದ ಕುರುಚಲು ಕಾಡಿನಲ್ಲಿ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಆದಿವಾಸಿ ಯುವಕನನ್ನು ಕೊಂದಿದ್ದ ಸ್ಥಳದ ಹತ್ತಿರದ ಟಿಬೆಟ್ ಕ್ಯಾಂಪಿನಲ್ಲಿ ಮತ್ತೆ ಹುಲಿ ಕಾಣಿಸಿಕೊಂಡು, ಹಸುವನ್ನು ಕೊಂದುಹಾಕಿದೆ. ಇದೀಗ ಹೊಸೂರು ಕೊಡಗು ಕಾಲೋನಿ,ಗುರುಪುರ ಹಾಗೂ ನಾಗಾಪುರ ಪುನರ್ವಸತಿ ಕೇಂದ್ರದ ಜನರು ಹಾಗೂ ಟಿಬೆಟಿಯನ್ನರು ಮತ್ತೆ ಹುಲಿ ಕಾಣಿಸಿಕೊಂಡಿರುವುದರಿಂದ ಆತಂಕಗೊಂಡಿದ್ದು, ಹುಲಿ ಸೆರೆಗೆ ಒತ್ತಾಯಿಸಿದ್ದಾರೆ.

Tags:
error: Content is protected !!