ನಂಜನಗೂಡಿನ ಸದ್ವೈದ್ಯ ಶಾಲಾ ಸಂಸ್ಥಾಪಕರಾಗಿದ್ದ ಬಿ.ವಿ.ಪಂಡಿತರು ಆಯುರ್ವೇದ ಉತ್ಪನ್ನಗಳನ್ನು ರೂಪಿಸಿದ ಹಿರಿಮೆ ಹೊಂದಿದ್ದಾರೆ. ದಂತಧಾವನ ಚೂರ್ಣ (ನಂಜನಗೂಡು ಹಲ್ಲು ಪುಡಿ) ಮೈಸೂರಿನ ಸ್ಥಳೀಯ ಕೈಗಾರಿಕೋದ್ಯಮದ ಹೆಗ್ಗುರುತಾಗಿದೆ. ಈ ಉತ್ಪನ್ನವು ರಾಜ್ಯದಲ್ಲೇ ಅಲ್ಲ ಹೊರ ರಾಜ್ಯಗಳಲ್ಲೂ ಮನೆ ಮಾತಾಗಿದೆ.
ಬಿ.ವಿ.ಪಂಡಿತರು ನಂಜನಗೂಡಿನಲ್ಲಿ ಸ್ಥಾಪಿಸಿದ ಸದ್ವೈದ್ಯ ಶಾಲಾ ನೂರು ವರ್ಷಗಳನ್ನು ಪೂರೈಸಿದ್ದು, ನೂರಾರು ಮಂದಿಗೆ ಉದ್ಯೋಗ ನೀಡುವ ಮೂಲಕ ಅವರ ಜೀವನ ಭದ್ರತೆಗೂ ಸಹಾಯವಾಗಿದೆ. ಆದರೆ ಆಯುರ್ವೇದ ಔಷಧಗಳ ಮೂಲಕ ಸಮಾಜಸೇವೆ ಮಾಡಿದ್ದ ಬಿ.ವಿ.ಪಂಡಿತರ ಹೆಸರನ್ನು ನಂಜನಗೂಡು ಪಟ್ಟಣದ ಯಾವುದಾದರೊಂದು ವೃತ್ತ ಅಥವಾ ರಸ್ತೆಗಳಿಗೆ ಇಡದಿರುವುದು ಬೇಸರದ ಸಂಗತಿಯಾಗಿದೆ. ಜನಪ್ರತಿನಿಧಿಗಳು ಹಾಗೂ ಪುರಸಭೆಯವರು ನಂಜನಗೂಡು ಪಟ್ಟಣದ ಪ್ರಮುಖ ವೃತ್ತ ಅಥವಾ ರಸ್ತೆಯೊಂದಕ್ಕೆ ಬಿ.ವಿ.ಪಂಡಿತರ ಹೆಸರಿಡಲು ಕ್ರಮ ಕೈಗೊಳ್ಳಬೇಕಾಗಿದೆ.
-ಅನಿಲ್ ಕುಮಾರ್, ನಂಜನಗೂಡು





