ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಜಿಲ್ಲಾಧಿಕಾರಿ ಹಳೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದಿನ ಬಳಕೆ ಪದಾರ್ಥಗಳು ಹಾಗೂ ಎಲ್ಲದರ ಬೆಲೆಗಳನ್ನು ಏರಿಕೆ ಮಾಡಿ ರಾಜ್ಯದ ಜನರು ಜೀವನ ನಡೆಸುವುದೇ ದುಸ್ತರವಾಗಿದೆ. ಈಗಾಗಲೇ ಕೋಟ್ಯಂತರ ರೂ. ಆದಾಯವಿರುವ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲಗಳನ್ನು ಮಾಡಿಕೊಡದೆ, ಲೂಟಿ ಮಾಡಲು ಹೊರಟಿರುವುದು ಖಂಡನೀಯ ಎಂದು ದೂರಿದರು.
ಇದನ್ನು ಓದಿ: ಪೊಲೀಸರು ಯಾರನ್ನು ಓಲೈಕೆ ಮಾಡದಿರಿ : ಡಿಜಿಪಿ ಚಂದ್ರಶೇಖರ್ ಸಲಹೆ
ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನದಿಂದ ಪ್ರಸಾದದ ರೂಪದಲ್ಲಿ ನೀಡಲಾಗುವ ಲಡ್ಡು ದರವನ್ನು ೧೫ರಿಂದ ೨೫ ರೂ.ಗಳಿಗೆ ಹೆಚ್ಚಿಸಿರುವುದು ಸರಿಯಲ್ಲ. ಈ ಲಡ್ಡುವಿನ ಗುಣಮಟ್ಟವಂತೂ ತೀರಾ ಕಳಪೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ದರ ಹೆಚ್ಚಿಸಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಸುರೇಶ್ ಗೋಲ್ಡ್, ಪ್ರಭುಶಂಕರ, ಕೃಷ್ಣಪ್ಪ, ಹನುಮಂತೇಗೌಡ, ಗಿರೀಶ್, ಸಿಂಧುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ನೇಹಾ, ಮಂಜುಳಾ, ಮಧುವನ ಚಂದ್ರು, ಹೊನ್ನೇಗೌಡ, ತಾಯೂರು ಗಣೇಶ್, ಡಾ.ನರಸಿಂಹೇಗೌಡ, ಬಸವರಾಜು , ಭಾಗ್ಯಮ್ಮ, ಸುಜಾತ, ಪ್ರಭಾಕರ್, ಡಾ.ಶಾಂತರಾಜೇ ಅರಸ್, ರಾಧಾಕೃಷ್ಣ , ನಂದಕುಮಾರ್, ದರ್ಶನ್ ಗೌಡ, ಪ್ರದೀಪ್, ರಘು ಅರಸ್, ಶಿವರಾಂ, ಗಣೇಶ್ ಪ್ರಸಾದ್, ಚಂದ್ರಶೇಖರ್, ರವೀಶ್, ರವಿ ನಾಯಕ್ ಮೊದಲಾದವರು ಹಾಜರಿದ್ದರು.





