Mysore
20
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ಸ್ವಾತಂತ್ರ್ಯ ಚಳುವಳಿಗೆ ವಂದೇ ಮಾತರಂ ಶಕ್ತಿ ತುಂಬಿತು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು.

ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸ್ವಾತಂತ್ರ್ಯ ಚಳುವಳಿಗೆ ವಂದೆ ಮಾತರಂ ಶಕ್ತಿ ತುಂಬಿದ್ದು, ವಂದೇ ಮಾತರಂ ಚರ್ಚೆಗೆ 10 ಗಂಟೆ ಮೀಸಲಿಡಲಾಗಿದೆ. ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವುದು ನಮ್ಮ ಹೆಮ್ಮೆ ಎಂದು ಹೇಳಿದರು.

ಇದನ್ನು ಓದಿ: ಸಿಎಂ ಸಿದ್ದರಾಮಯ್ಯಗೆ ಬಿಗ್‌ಶಾಕ್‌ ಕೊಟ್ಟ ಸುಪ್ರೀಂಕೋರ್ಟ್‌

ವಂದೇಮಾತರಂ ಅನ್ನು ಬ್ರಿಟೀಷರೂ ಬಳಸುತ್ತಿದ್ದರು. ವಂದೇ ಮಾತರಂ ಪ್ರಾಯಶ್ಚಿತ್ತದ ಮಾರ್ಗವನ್ನು ತೋರಿಸಿದ ಘೋಷಣೆಯಾಗಿತ್ತು. ವಂದೇ ಮಾತರಂ ಶಕ್ತಿ ಬ್ರಿಟೀಷರಿಗೂ ಗೊತ್ತಿತ್ತು, ಹೀಗಾಗಿ ಕಾನೂನು ಮೂಲಕ ನಿರ್ಬಂಧ ವಿಧಿಸಿದ್ದರು. ವಂದೇ ಮಾತರಂ ಪದ ಬಳಸಿದರೂ ಶಿಕ್ಷೆ ನೀಡಲಾಗುತ್ತಿತ್ತು. ಅಸಂಖ್ಯಾತರು ಗಲ್ಲು ಶಿಕ್ಷೆಗೆ ಒಳಗಾದರು. ತುಷ್ಟೀಕರಣ ರಾಜಕಾರಣಕ್ಕೆ ವಂದೇ ಮಾತರಂ ಬಲಿಯಾಯ್ತು. ವಂದೇ ಮಾತರಂಗಾಗಿ ತ್ಯಾಗ, ಬಲಿದಾನವಾಗಿದೆ ಎಂದು ಹಿಂದಿನ ಘಟನೆಗಳನ್ನು ನೆನೆದರು.

Tags:
error: Content is protected !!