ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್ ಅವರು ಮುಸ್ಲಿಮರಿಗೆ ‘ಮೆಕ್ಕಾ ಹಾಗೂ ಮದೀನಾ’ ಎಷ್ಟು ಮುಖ್ಯವೋ, ಹಿಂದೂಗಳಿಗೆ ಅಷ್ಟೇ ಮುಖ್ಯವಾದ ‘ಶ್ರೀ ಕೃಷ್ಣನ ಜನ್ಮಸ್ಥಳ ಮಥುರಾ ಮತ್ತು ಶಿವನ ಜ್ಞಾನವಾಪಿ’ ದೇವಾಲಯಗಳನ್ನು, ಮುಸ್ಲಿಮರು ಸ್ವಂತ ಇಚ್ಚೆಯಿಂದ ಹಿಂದೂಗಳಿಗೆ ಹಸ್ತಾಂತರಿಸುವುದರಿಂದ ಒಳ್ಳೆಯದಾಗಲಿದೆ ಎಂದು ಹೇಳಿರುವುದು ತುಂಬಾ ಶ್ಲಾಘನೀಯ ಸಂಗತಿ.
ಇದನ್ನೂ ಓದಿ: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು
ಮುಸ್ಲಿಮರಿಗಾಗಿ ಪ್ರತ್ಯೇಕ ದೇಶ ಸೃಷ್ಟಿಸಲು ಭಾರತವನ್ನು ವಿಭಜಿಸಿ, ಪಾಕಿಸ್ತಾನ ಭಾಗವನ್ನು ನೀಡಿದ ನಂತರವೂ ಭಾರತ ಜಾತ್ಯತೀತವಾಗಿಯೇ ಮುಂದುವರಿದಿದೆ. ಇದಕ್ಕೆ ಕಾರಣ ಭಾರತದಲ್ಲಿ ಹಿಂದೂಗಳು ಬಹು ಸಂಖ್ಯಾತರಾಗಿರುವುದು, ಇದನ್ನು ಮುಸ್ಲಿಮರು ಪ್ರಶಂಸೆ ಮಾಡಬೇಕು ಎಂದಿರುವುದು ಸ್ವಾಗತಾರ್ಹ ಮತ್ತು ಪ್ರಬುದ್ಧ ನಡೆ. ಭಾರತವೇನಾದರೂ ಮುಸ್ಲಿಂ ಬಹುಸಂಖ್ಯಾತ ದೇಶವಾಗಿದ್ದರೆ ಅದು ಎಂದಿಗೂ ಜಾತ್ಯತೀತ ದೇಶವಾಗಿ ಇರುತ್ತಿರಲಿಲ್ಲ. ಆದ್ದರಿಂದ ಈ ಸಂಗತಿಯನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು ಎಂದು ವಾಸ್ತವವನ್ನು ಹೇಳಿ ಗಮನ ಸೆಳೆದಿರುವುದು ಎಲ್ಲಾ ಭಾರತೀಯರು ಮೆಚ್ಚುವಂತಹ ಸಂಗತಿಯಾಗಿದೆ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





