Mysore
16
clear sky

Social Media

ಮಂಗಳವಾರ, 20 ಜನವರಿ 2026
Light
Dark

ಭಾರತ-ರಷ್ಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ

ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ನವದೆಹಲಿಯ ಹೈದರಾಬಾದ್‌ ಹೌಸ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆದಿದೆ. ಈ ವೇಳೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ದ್ವಿಪಕ್ಷೀಯ ಮಾತುಕತೆ ವೇಳೆ ಪುಟಿನ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಇದನ್ನು ಓದಿ: ವಾಚ್‌ ವಿಚಾರವಾಗಿ ಸುಳ್ಳು ಹೇಳಿದ್ದರೆ ಇಂದೇ ರಾಜೀನಾಮೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಈ ವೇಳೆ ಮಾತನಾಡಿದ ರಷ್ಯಾ ಅಧ್ಯಕ್ಷ ಪುಟಿನ್‌, ಭಾರತ ನೀಡಿದ ಆತಿಥ್ಯಕ್ಕೆ ಸಂತಸವಾಗಿದೆ. ಉಭಯ ದೇಶಗಳ ನಡುವೆ ಆರ್ಥಿಕ ಅಭಿವೃದ್ಧೊ ಮತ್ತಷ್ಟು ಸಮೃದ್ಧಿಯಾಗಲಿದೆ. ಆರ್ಥಿಕತೆ, ವಾಣಿಜ್ಯ, ರಕ್ಷಣೆ ವಿಚಾರವಾಗಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದೇವೆ. 2030ರವರೆಗೆ ಹಲವು ಯೋಜನೆಗಳಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಭಾರ-ರಷ್ಯಾ ನಡುವಿನ ನೀತಿ ಸಮೃದ್ಧಪಡಿಸಲು ಈ ಭೇಟಿ ಪೂರಕವಾಗಿದೆ. ರಷ್ಯಾ ನಾಗರಿಕರಿಗೆ 30 ದಿನಗಳವರೆಗೆ ಉಚಿತ ಇ-ವೀಸಾ ಸೌಲಭ್ಯ ನೀಡುವುದಾಗಿ ಭಾರತ ಒಪ್ಪಿದೆ. ರಷ್ಯಾ ನಾಗರಿಕರಿಗೆ ಗ್ರೂಪ್‌ ಟೂರಿಸ್ಟ್‌ ಇ-ವೀಸಾ ನೀಡಲು ನಿರ್ಧರಿಸಲಾಗಿದೆ. ಹೊಸಾಗಿ ಎರಡು ರಾಯಭಾರ ಕಚೇರಿಗಳನ್ನು ತೆರೆಯಲಾಗುವುದು. ಯಾವುದೇ ಅಡೆತಡೆ ಇಲ್ಲದೇ ಭಾರತಕ್ಕೆ ಇಂಧನ ಪೂರೈಕೆ ಮುಂದುವರೆಸಲಾಗುತ್ತದೆ. ರಷ್ಯಾ ಹಾಗೂ ಭಾರತ ಸ್ವತಂತ್ರವಾಗಿ ವಿದೇಶಾಂಗ ನೀತಿಗಳನ್ನು ಹೊಂದಿರಲಿದೆ ಎಂದು ಹೇಳಿದರು.

Tags:
error: Content is protected !!