ಬೆಂಗಳೂರು: ಗೃಹಲಕ್ಷ್ಮೀಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
ಈ ಬಗ್ಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಮಹಿಳೆಯರು 30,000 ರೂನಿಂದ 3 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಪಡೆಯಬಹುದಾಗಿದೆ.
ವೈಯಕ್ತಿಕ ಸಾಲವನ್ನು 6 ಲಕ್ಷ ರೂಪಾಯಿಗೆ ಹೆಚ್ಚಳ ಮಾಡುವಂತೆ ಬ್ಯಾಂಕುಗಳಿಗೆ ಮನವಿ ಮಾಡಿದ್ದಾರೆ. ಮೊದಲು ನೋಂದಣಿ ಮಾಡಿಕೊಂಡವರಿಗೆ ಸಾಲ ಸೌಲಭ್ಯ ಸಿಗಲಿದೆ.
ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿ ದರದ ಅನ್ವಯ ಕಡಿಮೆ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಕೇವಲ ಆರು ತಿಂಗಳಲ್ಲಿ ಸಾಲ ಸಿಗಲಿದ್ದು, ತಿಂಗಳಿಗೆ 200 ರೂಪಾಯಿಯಂತೆ ಹಣ ಕಟ್ಟಿದರೆ ಸದಸ್ಯತ್ವ ಸಿಗಲಿದೆ ಎಂದು ತಿಳಿಸಿದರು.




