ನಂಜನಗೂಡು: ಇತಿಹಾಸ ಪ್ರಸಿದ್ಧ ಹೆಮ್ಮರಗಾಲ ಗ್ರಾಮದ ಶ್ರೀ ಬೀರೇಶ್ವರ ಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆಯ ಅಂಗವಾಗಿ ಶಿವ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ಹೆಮ್ಮರಗಾಲ ಹಾಗೂ 88 ಗಡಿ ಯಜಮಾನರುಗಳು ಹಾಗೂ ಗ್ರಾಮಸ್ಥರ ವತಿಯಿಂದ ಪ್ರತಿ ವರ್ಷವೂ ಶಿವ ದೀಪೋತ್ಸವವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದು 19ನೇ ವರ್ಷದ ಶಿವ ದೀಪೋತ್ಸವ ಕಾರ್ಯಕ್ರಮವನ್ನು ದೇವಾಲಯದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.
ಕಾಗಿನೆಲೆ ಕನಕ ಗುರು ಪೀಠಾಧ್ಯಕ್ಷರಾದ ಶ್ರೀ ಶಿವಾನಂದಪುರಿ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ 10.30ರಿಂದ 12 ಗಂಟೆ ಒಳಗೆ ಸಲ್ಲುವ ಶುಭ ಅಮೃತ ಸಿದ್ದಿ ಯೋಗದಲ್ಲಿ ಶ್ರೀ ಬೀರೇಶ್ವರ ಸ್ವಾಮಿಗೆ ಶಿವ ದೀಪೋತ್ಸವದ ಪ್ರಯುಕ್ತ ಶ್ರೀ ಗಣಪತಿ ಪೂಜೆ ಶ್ರೀ ಬೀರೇಶ್ವರ ಸ್ವಾಮಿ ಹಾಗೂ ಶ್ರೀ ಕಾಳಿಕಾಂಬ ಅಮ್ಮನವರ ಹಾಗೂ ಗಣಪತಿ ಉತ್ಸವಗಳಿಗೆ ಹಾಗೂ ನವಗ್ರಹಗಳಿಗೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.
ದೇವಾಲಯಕ್ಕೆ ನೂರಾರು ಭಕ್ತರು ಆಗಮಿಸಿ ಶಿವ ದೀಪೋತ್ಸವದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು.





