Mysore
25
broken clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕೊಳ್ಳೇಗಾಲ | ಕಾರುಗಳ ನಡುವೆ ಡಿಕ್ಕಿ : ನಾಲ್ವರು ಗಂಭೀರ

ಕೊಳ್ಳೇಗಾಲ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರಿಗೆ ತೀವ್ರ ಗಾಯವಾಗಿರುವ ಘಟನೆ ತಾಲ್ಲೂಕಿನ ತೇರಂಬಳ್ಳಿ ಗ್ರಾಮದ ರಸ್ತೆಯಲ್ಲಿ ನಡೆದಿದೆ.

ಘಟನೆಯಲ್ಲಿ ಶಾಗ್ಯದ ಜಯಂತ್, ಕಲುಬರಗಿಯ ಸಂತೋಷ್ ಗಾಜರಿ ಅವರ ಕಾಲಿಗೆ ಪೆಟ್ಟಾಗಿದೆ. ಶಿಡ್ಲಘಟ್ಟದ ವೆಂಕಟರೆಡ್ಡಿ, ಹುಣಸೂರು ತಾಲ್ಲೂಕಿನ ಸೋಮನಹಳ್ಳಿ ಮಧು ಅವರಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಶಾಗ್ಯದಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಜಯಂತ್ ಕಾರಿಗೆ ಮೈಸೂರಿನಿಂದ ಕೊಳ್ಳೇಗಾಲದ ಹಂಪಾಪುರದಲ್ಲಿ ಲೇಔಟ್ ವೀಕ್ಷಣೆ ಬರುತ್ತಿದ್ದ ಮೂವರಿದ್ದ ಕಾರಿನ ನಡುವೆ ಈ ಅಪಘಾತ ಉಂಟಾಗಿದೆ. ಈ ಸಂಬಂಧ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯ ಎಸ್‌ಐ ಕರಿಬಸಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ವಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:
error: Content is protected !!