ಬೆಂಗಳೂರು : ದಿತ್ವಾ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.
ಶ್ರೀಲಂಕಾ ಕಡಲ ತೀರದಲ್ಲಿ ಅಬ್ಬರವಿಡುತ್ತಿರುವ ದಿತ್ವಾ ಚಂಡಮಾರುತ ಇಂದು ತಮಿಳುನಾಡಿನ ದಕ್ಷಿಣ ಕರಾವಳಿಗೆ ಪ್ರವೇಶಿಸಿದೆ.
ಚಂಡಮಾರುತದ ಪರಿಣಾಮದಿಂದ ಹಗಲಿನಲ್ಲಿ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಇನ್ನೂ ಮೂರು ದಿನಗಳ ಕಾಲ ತಣ್ಣನೆಯ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಹಗುರದಿಂದ ಮಳೆಯಾಗುತ್ತಿದೆ. ಇನ್ನೂ ಮೈಸೂರಲ್ಲಿಯೂ ಸಹ ವಾತಾವರಣ ಕೂಲ್ ಆಗಿದೆ.
ಇನ್ನು ದ್ವೀಪ ರಾಷ್ಟ್ರ ಶ್ರೀಲಂಕಾಗೆ ದಿತ್ವಾ ಚಂಡಮಾರುತ ಅಪ್ಪಳಿಸಿದೆ. ಪರಿಣಾಮ 153 ಜನ ಸಾವನ್ನಪ್ಪಿದ್ದು, ಅಪಾರ ಹಾನಿಯಾಗಿದೆ. ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.





