Mysore
35
overcast clouds

Social Media

ಭಾನುವಾರ, 03 ಮೇ 2026
Light
Dark

ಒಗ್ಗಟ್ಟಿನ ಸಂದೇಶ ಕೊಟ್ಟ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ತಾರಕ್ಕೇರಿರುವ ಸಂದರ್ಭದಲ್ಲಿಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖಾಮುಖಿ ಆಗಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದು ಸಿದ್ದರಾಮಯ್ಯರ ಅಧಿಕೃತ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ್ದು, ಸಿದ್ದರಾಮಯ್ಯ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಇದನ್ನು ಓದಿ: ಮೈಸೂರು| ಡಿಕೆಶಿಗೆ ಸಿಎಂ ಸ್ಥಾನ ನೀಡುವಂತೆ ಒಕ್ಕಲಿಗರ ಶಕ್ತಿ ಪ್ರದರ್ಶನ

ಬಳಿಕ ಸ್ಪೆಷಲ್‌ ರೂಮ್‌ನಲ್ಲಿ ಕುಳಿತು ಬ್ರೇಕ್‌ಪಾಸ್ಟ್‌ ಶುರು ಮಾಡಿದ್ದಾರೆ. ಅಲ್ಲಿಯೇ ಒನ್‌ ಟು ಒನ್‌ ಮೀಟಿಂಗ್‌ ಶುರು ಮಾಡಿದ್ದು, ಬೇರೆಯವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಸಿಎಂ ಹಾಗೂ ಡಿಸಿಎಂ ಬ್ರೇಕ್‌ಪಾಸ್ಟ್‌ ಮೀಟಿಂಗ್‌ ಹಿನ್ನೆಲೆಯಲ್ಲಿ ಸಿಎಂ ಕಾವೇರಿ ನಿವಾಸದಲ್ಲಿ ಹೆಚ್ಚಿನ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

Tags:
error: Content is protected !!