ಮೈಸೂರು: ತಮ್ಮ ಬ್ಯಾಂಕ್ ಖಾತೆಗೆ 26 ಸಾವಿರ ಜಮಾ ಆಗಿದೆ ಎಂದು ಸಂತಸಗೊಡ ಉದ್ಯಮಿಯೊಬ್ಬರು ಮೆಸೇಜ್ ಓಪನ್ ಮಾಡಿದ ಕೂಡಲೇ ಅವರ ಖಾತೆಯಲ್ಲಿದ್ದ 1.98 ಲಕ್ಷ ರೂ ಕಳೆದುಕೊಂಡಿದ್ದಾರೆ.
ಮೈಸೂರಿನ ಹೆಬ್ಬಾಳು ಬಡಾವಣೆಯ ನಿವಾಸಿ ಹಣ ಕಳೆದುಕೊಂಡ ಉದ್ಯಮಿ. ಬ್ಯಾಂಕಿನ ಸಿಬ್ಬಂದಿ ಎಂದು ಕರೆ ಮಾಡಿದ ವಂಚಕರು ಬ್ಯಾಂಕಿನ ವಿವರ ಕೇಳಿದ್ದಾರೆ. ಇದು ವಂಚಕರ ಕರೆ ಎಂದು ಅನುಮಾನದಿಂದ ಉದ್ಯಮಿ ಕರೆಯನ್ನು ಸ್ಥಗಿತಗೊಳಿಸಿದ್ದಾರೆ.
ಇದನ್ನು ಓದಿ: ಶಾಂತಿನಗರದಲ್ಲಿ ಯುವಕನ ಕೊಲೆ ಪ್ರಕರಣ: ತಾಯಿಯ ಆಕ್ರಂದನ
ನಂತರ ಅವರ ಬ್ಯಾಂಕ್ ಖಾತೆಗೆ 26,000 ರೂ ಜಮಾ ಆಗಿದೆ ಎನ್ನುವ ಸಂದೇಶ ಬಂದಿದ್ದು, ಅದನ್ನು ಓಪನ್ ಮಾಡಿದ ಕೂಡಲೇ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಡಿತಗೊಂಡು ವಂಚಕರ ಪಾಲಾಗಿದೆ.
ಇದರಿಂದ ಕಂಗಾಲಾದ ಉದ್ಯಮಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





