Mysore
18
few clouds

Social Media

ಶನಿವಾರ, 24 ಜನವರಿ 2026
Light
Dark

ಚಾಮರಾಜನಗರ| ಚಿನ್ನದ ವ್ಯಾಪಾರಿ ಕಾರು ಅಡ್ಡಗಟ್ಟಿ ದರೋಡೆ

ಚಾಮರಾಜನಗರ: ಜಿಲ್ಲೆಯ ಬಂಡೀಪುರ ಅರಣ್ಯ ಮಾರ್ಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯನ್ನ ತಡೆಗಟ್ಟಿ ದುಷ್ಕರ್ಮಿಗಳು ಕೋಟ್ಯಾಂತರ ರೂ ಮೌಲ್ಯದ 1.2 ಕೆಜಿ ಚಿನ್ನ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಾಡಿನೊಳಗೆ ಚಿನ್ನದ ವ್ಯಾಪಾರಿಯ ವಾಹನಕ್ಕೆ ಹಿಂಭಾಗ ಹಾಗೂ ಮುಂಭಾಗ ಡಿಕ್ಕಿ ಹೊಡೆದು ಕಾರು ನಿಲ್ಲಿಸಿದ್ದು, ನಂತರ ಖದೀಮರು ಕಾರಿನಿಂದ ಇಳಿದು ಬಂದು, ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಕಾರಿನಲ್ಲಿದ್ದ 1.2 ಕೆಜಿ ಚಿನ್ನ ಕದ್ದು ಎಸ್ಕೇಪ್‌ ಆಗಿದ್ದಾರೆ.

ಕಾರಿನಲ್ಲಿ ತೆರಳುತ್ತಿದ್ದ ವ್ಯಾಪಾರಿ ಕೇರಳ ಮೂಲದವರು ಎನ್ನಲಾಗಿದೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Tags:
error: Content is protected !!