Mysore
28
scattered clouds

Social Media

ಭಾನುವಾರ, 25 ಜನವರಿ 2026
Light
Dark

ಸಿಎಂ ಬದಲಾವಣೆ ವಿಚಾರ: ವರಿಷ್ಠರ ತೀರ್ಮಾನವೇ ಅಂತಿಮ ಎಂದ ತನ್ವೀರ್‌ ಸೇಠ್‌

ಮೈಸೂರು: ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ತನ್ವೀರ್‌ ಸೇಠ್‌ ಅವರು, ರಾಜ್ಯದ ಜನ ಬಿಜೆಪಿ ವಿರುದ್ಧ ಸ್ಪಷ್ಟ ಅಧಿಕಾರ‌ ನೀಡಿದ್ದಾರೆ. ನಿನ್ನೆಗೆ ನಮ್ಮ ಸರ್ಕಾರ ಎರಡೂವರೆ ವರ್ಷ ಪೂರೈಸಿದೆ. ಎಲ್ಲದಕ್ಕೂ ವರಿಷ್ಠರ ತೀರ್ಮಾನವೇ ಅಂತಿಮವಾಗಿರುತ್ತದೆ. ಸಿಎಂ, ಡಿಸಿಎಂ ಕೂಡ ಸಾರಿ ‌ಸಾರಿ‌ ಹೇಳಿದ್ದಾರೆ. ಅಧಿಕಾರ‌ ಹಂಚಿಕೆ‌ ಸೂತ್ರ ನಮಗೆ ಗೊತ್ತಿಲ್ಲ. ನಾನು ಯಾವ ಬಣದಲ್ಲೂ ಇಲ್ಲ. ನಾವು ನಾಯಕರ ಪೂಜೆ, ಆರಾಧನೆ ಮಾಡಲ್ಲ. ಕೇವಲ ರಾಜಕಾರಣ ಮಾಡಲು ಪಕ್ಷದಲ್ಲಿಲ್ಲ. ಡಿಕೆ ಸುರೇಶ್, ರಾಜಣ್ಣ ಅವರ ಹೇಳಿಕೆಗೆ ವೈಯ್ಯಕ್ತಿಕ ಸ್ವಾತಂತ್ರ್ಯವಿದೆ. ನಾನು ಆರಾಧಿಸುವ ದೈವವೇ ಸರಿ ಅನ್ನೋದು ಸರಿ ಅಲ್ಲ. ಡಿಕೆಶಿ ಋಣ ನನ್ನ ಮೇಲೆ ಇದ್ದೆ ಇದೆ. ಈ ಹಿಂದೆ ನನ್ನ ತಂದೆ ತೀರಿ ಹೋದ ಸಮಯದಲ್ಲಿ ಉಪಚುನಾವಣೆ ಬಂತು.

ಇದನ್ನು ಓದಿ: ಸಿಎಂ ಆಗಿ ನಾನೇ ಮುಂದುವರಿಯುತ್ತೇನೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಲೋಕಸಭಾ ಸೋತಿದ್ರೂ ಡಿಕೆಶಿ ನನ್ನ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಿದ್ರು. ನಾನು ಅದನ್ನು ಮರೆಯಲ್ಲ. ನಾನು ಪಕ್ಷೇತರವಾಗಿ ನಗರ ಪಾಲಿಕೆಗೆ ಆಯ್ಕೆಯಾಗಿದ್ದೆ. ಆ ಸಮಯದಲ್ಲಿ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದರು. ನನ್ನನ್ನು ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಆದ್ರೆ ನಾನು ಮೇಯರ್ ಆಗಲಿಲ್ಲ. ಅದು ಬೇರೆ ವಿಚಾರ. ಸಿದ್ದರಾಮಯ್ಯ ಋಣ ಕೂಡ ನನ್ನ ಮೇಲಿದೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಬದಲಾವಣೆ ಬಗ್ಗೆ ಏನು ಮಾತನಾಡಬೇಡಿ ಎಂದು ಹೈಕಮಾಂಡ್ ಹೇಳಿದೆ ಎಂದರು.

ಇನ್ನು ಸಚಿವ ಸಂಪುಟ ಪುನಾರಚನೆ ಆದ್ರೆ ನನಗೂ ಸಚಿವ ಸ್ಥಾನ ಸಿಗುತ್ತದೆ. ಈ ಬಗ್ಗೆ ನನಗೆ ಸಂಪೂರ್ಣ ಭರವಸೆ ಇದೆ. ನಾನು ಸನ್ಯಾಸಿ ಅಲ್ಲ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ನನ್ನ ಬೆಂಬಲವಿದೆ. ಹೈಕಮಾಂಡ್ ಯಾರನ್ನೇ ಸಿಎಂ ಮಾಡಿದ್ರು ನಾನು ಬೆಂಬಲಿಸುತ್ತೇನೆ. ಅಧಿಕಾರ ಕೊಟ್ಟವರ ಪರ ನಾನು ನಿಲ್ಲಲ್ಲ. ಪಕ್ಷದ ಪರ ನಾನು ನಿಲ್ಲುತ್ತೇನೆ ಎಂದು ಹೇಳಿದರು.

ಇನ್ನು ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಹಾಗೂ ಸಚಿವರು, ಶಾಸಕರ ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇಕ್ಬಾಲ್ ಹುಸೇನ್ ಯಾವ ಜಾತಿ ?
ನಾಯಕರ ಮೇಲೆ ಕೆಲವರು ನಂಬಿಕೆ ಇಟ್ಟುಕೊಂಡಿರುತ್ತಾರೆ. ಯಾರಿಗೆ ಬೆಂಬಲ ಇದೆ ಅವರ ಪರ ಕೆಲವರು ನಿಲ್ಲುತ್ತಾರೆ ಎಂದರು.

Tags:
error: Content is protected !!