Mysore
30
few clouds

Social Media

ಬುಧವಾರ, 28 ಜನವರಿ 2026
Light
Dark

7 ಕೋಟಿ ದರೋಡೆ ಪ್ರಕರಣ: ಸಿಎಂಎಸ್‌ ಮಾಜಿ ನೌಕರ ಅರೆಸ್ಟ್‌

ಬೆಂಗಳೂರು: ಬೆಂಗಳೂರಿನಲ್ಲಿ 7 ಕೋಟಿ ರೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಎಸ್‌ ಮಾಜಿ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.

ಜೊತೆಗೆ 5.30 ಕೋಟಿ ರೂ ಹಣವನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನನ್ನು ಝೇವಿಯರ್‌ ಎಂದು ಗುರುತಿಸಲಾಗಿದ್ದು, ಈತ ಕಾನ್ಸ್‌ಟೇಬಲ್‌ ಅಣ್ಣಪ್ಪನ ಸ್ನೇಹಿತ ಎಂದು ಗುರುತಿಸಲಾಗಿದೆ. ಇಬ್ಬರು ಸೇರಿಕೊಂಡು ಈ ದರೋಡೆಗೆ ಸ್ಕೆಚ್‌ ಹಾಕಿದ್ದರು.

ಇದನ್ನು ಓದಿ: 7 ಕೋಟಿ ದರೋಡೆ ಪ್ರಕರಣ: ಕೃತ್ಯಕ್ಕೆ ಬಳಸಿದ್ದ ಕಾರು ಆಂಧ್ರಪ್ರದೇಶದಲ್ಲಿ ಪತ್ತೆ

ದರೋಡೆ ಪ್ರಕರಣ ಸಂಬಂಧ ಗೋವಿಂದಪುರ ಠಾಣೆ ಇನ್ಸ್‌ಪೆಕ್ಟರ್‌ ಅಣ್ಣಪ್ಪ ನಾಯಕ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ನಾಯಕ್‌ ಇಡೀ ದರೋಡೆಯ ಮಾಸ್ಟರ್‌ ಮೈಂಡ್‌ ಎನ್ನಲಾಗಿದ್ದು, ಈತನ ಬಂಧನದ ಬೆನ್ನಲ್ಲೇ ಸ್ನೇಹಿತ ಝೇವಿಯರ್‌ನನ್ನು ಕೂಡ ಬಂಧಿಸಲಾಗಿದೆ.

ಅಣ್ಣಪ್ಪ ನಾಯ್ಕ್‌ ದರೋಡೆ ಮಾಡಲು ಹುಡುಗರ ಗ್ಯಾಂಗ್‌ ರೆಡಿ ಮಾಡಿದ್ದನು. ಕಳ್ಳತನ ಹೇಗೆ ಮಾಡಬೇಕು? ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಈತ ಹುಡುಗರಿಗೆ ತರಬೇತಿ ಕೊಟ್ಟಿದ್ದನು. ಈತನ ಪ್ಲ್ಯಾನ್‌ನಂತೆ ಹುಡುಗರು 7.11 ಕೋಟಿ ದರೋಡೆ ಮಾಡಿದ್ದಾರೆ ಎನ್ನಲಾಗಿದ್ದು, ಸಿಎಂಎಸ್‌ ಸೆಕ್ಯುರಿಟಿ ಏಜೆನ್ಸಿಯ ಮಾಜಿ ಉದ್ಯೋಗಿಗಳು ಕೂಡ ದರೋಡೆಗೆ ಸಾಥ್ ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

Tags:
error: Content is protected !!